ಮೌಲ್ಯಯುತವಾಗಿ ಬದುಕಲು ಶಿಕ್ಷಣ ಅವಶ್ಯ

5 HRP 02
ಹರಪನಹಳ್ಳಿ ಸಮೀಪದ ಕೆ.ಕಲ್ಲಹಳ್ಳಿಯಲ್ಲಿ ಆಯೋಜಿಸಿದ್ದ ದುಗಾರ್ಂಬಿಕಾದೇವಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶ್ರೀ ಪಶುಪತಿ ಶಿವಾನಂದ ಸ್ವಾಮೀಜಿ ಮಾತನಾಡಿದರು. ಮರುಳಾರಾಧ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಎಂ.ದ್ಯಾಮಪ್ಪ, ಟ್ರಸ್ಟ್ ಕಮಿಟಿ ಅಧ್ಯಕ್ಷ ಕೌಟಿ ದೇವೇಂದ್ರಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಎಚ್.ಟಿವನಜಾಕ್ಷಿ ಶಿವಯೋಗಿ, ಸುಮಲತಾ ರಾಜಪ್ಪ, ಅಳವಂಡಿ ವಿಜಯಪ್ಪ, ಡಾ.ಚಂದ್ರಶೇಖರ, ಹುಳ್ಳಿಕೊಟ್ರಪ್ಪ ಇದ್ದರು.
Published on

ಹರಪನಹಳ್ಳಿ: ಪಾಲಕರು ಮಕ್ಕಳಿಗೆ ವಿದ್ಯೆಯೊಂದಿಗೆ ಮೌಲ್ಯಯುತವಾಗಿ ಬದುಕುವುದನ್ನು ಕಲಿಸಬೇಕು ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ದುಗಾರ್ಂಬಿಕಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳು ಎಲ್ಲಿ ಹೆಚ್ಚು ನಡೆಯುತ್ತವೆಯೋ ಅಲ್ಲಿ ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಕೆ.ಕಲ್ಲಹಳ್ಳಿ ಗ್ರಾಮಸ್ಥರು ನಿರಂತರ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ಪಶುಪತಿ ಶಿವಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದ್ದು, ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ದೇವಸ್ಥಾನ ನಿರ್ಮಾಣದಿಂದ ಗ್ರಾಮಸ್ಥರಿಗೆ ಶಾಂತಿ-ನೆಮ್ಮದಿ ದೊರಕಲಿದೆ ಎಂದರು.

ಗ್ರಾಪಂ ಸದಸ್ಯರಾದ ನಾಗೇಂದ್ರಪ್ಪ, ಕಟಾಣಿ ಪುಷ್ಪಾವತಿ ರಾಜಪ್ಪ, ಎ.ನಿಂಗಪ್ಪ, ತಿಮ್ಮೇಶ, ಪಿಡಿಒ ಕೆ.ಅನಂದನಾಯ್ಕ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಎಂ.ಗುರುಸಿದ್ದಯ್ಯ, ಲಿಂಗನಾಯಕನಹಳ್ಳಿ ಮಠದ ನಿರಂಜನ ದೇವರು, ಹಿರೇಕುರುವತ್ತಿ ಸಿದ್ದನಂದೀಶ್ವರ ಸ್ವಾಮೀಜಿ, ಪ್ರಮುಖರಾದ ನಂದೀಶ ಆಚಾರಿ, ಎಚ್.ಮಂಜುನಾಥ, ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೇಲೂರು ಅಂಜಪ್ಪ, ಕೆ.ಎಂ.ಕೊಟ್ರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net