

ಧಾರವಾಡ: ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ತೇಗೂರ ಬಳಿ ಸ್ಥಾಪಿಸಿರುವ ಚೆಕ್‌ಪೋಸ್ಟ್ ನಲ್ಲಿ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ತಪಾಸಣೆ ವೇಳೆ ಸಮರ್ಪಕ ದಾಖಲೆ ಇಲ್ಲದ 38,50,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಪತ್ತೆಯÁಗಿವೆ.
ಗುರುವಾರ ರಾತ್ರಿ ೧೧.೩೫ರ ಸುಮಾರಿಗೆ ನಿಪ್ಪಾಣಿ- ಗಂಗಾವತಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಮಹಾರಾಷ್ಟç ಕೊಲ್ಹಾಪುರದ ಪ್ರಕಾಶಕುಮಾರ ಹುಕುಮಜಿ ಮಾಲಿ ಎಂಬುವರು ಅಂದಾಜು ೭೭೮ ಗ್ರಾಂ ಬೋರಮಾಳ ಸರ, ಗುಂಡುಗಳು, ಲಾಕೆಟ್ ಇರುವ ಬಂಗಾರದ ಆಭರಣಗಳೊಂದಿಗೆ ಸಿಂಧನೂರ ಕಡೆಗೆ ಹೋಗುತ್ತಿದ್ದರು. ತಪಾಸಣೆ ವೇಳೆ ಅವರು ತೋರಿಸಿದ ಬಿಲ್‌ಗಳಲ್ಲಿ ಇರುವ ಬಂಗಾರದ ಆಭರಣಗಳ ತೂಕಕ್ಕೂ, ತಪಾಸಣೆ ವೇಳೆ ಸಿಕ್ಕ ಬಂಗಾರದ ಆಭರಣಗಳ ತೂಕಕ್ಕೂ ವ್ಯತ್ಯಾಸ ಕಂಡುಬAದಿದೆ. ಇದರಿಂದ ಸಂಶಯಗೊAಡ ಅಽಕಾರಿಗಳ ತಂಡ, ಚಿನ್ನಾಭರಣ ವಶಪಡಿಸಿಕೊಂಡು ಗರಗ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಜಿಲ್ಲಾ ಚುನಾವಣಾಽಕಾ ದಿವ್ಯ ಪ್ರಭು ತಿಳಿಸಿದ್ದಾರೆ.