ಚೌಡ್ಲು ಪ್ರಾಥಮಿಕ ಶಾಲೆಯಲ್ಲಿ ಪರಾಕ್ರಮ ದಿನಾಚರಣೆ

23SPT3.
ಸೋಮವಾರಪೇಟೆ ಸಮೀಪದ ಚೌಡ್ಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಭಾಷ್ ಚಂದ್ರ ಜಯಂತಿ ಪ್ರಯುಕ್ತ ಮಂಗಳವಾರ ಪರಾಕ್ರಮ ದಿನಾಚರಣೆಯ ಪ್ರಯುಕ್ತ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಲ್ಲಪ್ಪ, ನಿರ್ವಾಣಿಶೆಟ್ಟಿ, ಕುಟ್ಟಪ್ಪ, ಆನಂದ, ಕೆಂಚೇಗೌಡ ಇದ್ದರು.
Published on

ಸೋಮವಾರಪೇಟೆ: ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಚೌಡ್ಲು ಪ್ರಾಥಮಿಕ ಶಾಲೆಯಲ್ಲಿ ಸುಭಾಷ್‌ಚಂದ್ರ ಬೋಸ್ ಜಂಯಂತಿ ಪ್ರಯುಕ್ತ ಪರಾಕ್ರಮ ದಿನವನ್ನು ಮಂಗಳವಾರ ಆಚರಿಸಲಾಯಿತು.

ಸಂಘದ ಅಧ್ಯಕ್ಷರಾದ ಸಿ.ಕೆ.ಮಲ್ಲಪ್ಪ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಸುಭಾಷ್‌ಚಂದ್ರ ಬೋಸ್ ಒಬ್ಬ ಮಹಾನ್ ದೇಶ ಪ್ರೇಮಿಯಾಗಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿ. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ದಿನದ ಮಹತ್ವದ ಬಗ್ಗೆ ಟಿ. ಕೆ.ಮಾಚಯ್ಯ ಮಾತನಾಡಿದರು. ಸಂಘದ ಗೌರವ ಅಧ್ಯಕ್ಷ ಹಾಲೆಬೇಲೂರು ನಿರ್ವಾಣಿಶೆಟ್ಟಿ, ಉಪಾಧ್ಯಕ್ಷ ಎಚ್.ಜಿ.ಕುಟ್ಟಪ್ಪ, ಕಾರ್ಯದರ್ಶಿ ಬಿ.ಎಂ.ಆನಂದ, ಖಜಾಂಜಿ ಎಸ್.ಆರ್.ಕೆಂಚೇಗೌಡ, ಸಲಹೆಗಾರರಾದ ಎಂ.ಎ.ವೀರಪ್ಪ, ಮುಖ್ಯ ಶಿಕ್ಷಕರಾದ ಎಂ.ಬಿ.ರಾಜಣ್ಣ ಇದ್ದರು.
ಕಾರ್ಯಕ್ರಮ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ, ಭಾವಗೀತೆ, ಚಿತ್ರಕಲೆ, ನೃತ್ಯ ಸ್ಪರ್ಧೆ ನಡೆದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net