ವಾಲ್ನೂರು ತ್ಯಾಗತ್ತೂರು ದವಸ ಭಂಡಾರ ಮಹಾಸಭೆ

Valnur Thyagattur Davas Bhandara Mahasabha
Published on

ಕುಶಾಲನಗರ:

ಕುಶಾಲನಗರ ತಾಲೂಕು ವಾಲ್ನೂರು ಗ್ರಾಮದಲ್ಲಿರುವ ವಾಲ್ನೂರು ತ್ಯಾಗತ್ತೂರು ವಿವಿಧೋದ್ದೇಶ ದವಸ ಭಂಡಾರದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎ.ವಿ. ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಬೆಯಲ್ಲಿ ಮಾತನಾಡಿದ ಶಾಂತಕುಮಾರ್, 210 ಸದಸ್ಯರು ಇರುವ ಸಂಘ ಪ್ರಸಕ್ತ ಆರ್ಥಿಕ ವರ್ಷದಲ್ಲಿ 41 ಲಕ್ಷ ರೂ. ಸಾಲ ನೀಡಿದೆ. ಸಂಘದ ಸದಸ್ಯರಿಗೆ ಸಾಲ ನೀಡಿದ ಬಡ್ಡಿಯ ಮೊಬಲಗು ಸೇರಿದಂತೆ ವಿವಿಧ ವಹಿವಾಟುಗಳ ಮೂಲಕ 2.84 ಲಕ್ಷ ಲಾಭ ಗಳಿಸಿದೆ.

ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ರಷ್ಟು ಡಿವಿಡೆಂಡ್ ನೀಡಲಾಗಿದೆ. ಕೊಡಗು ಜಿಲ್ಲೆಯಲ್ಲಿ 92 ದವಸ ಭಂಡಾರಗಳಿದ್ದು ವಾಲ್ನೂರು ತ್ಯಾಗತ್ತೂರು ದವಸ ಭಂಡಾರದ ಸಾಲ ವಸೂಲಾತಿ ಶೇ.100 ರಷ್ಟಿರುವ ಕಾರಣ ಸಂಘಕ್ಕೆ ' ಎ ' ದರ್ಜೆಯ ಮಾನ್ಯತೆ ದೊರಕಿದೆ. ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ದವಸ ಭಂಡಾರದ ಸದಸ್ಯರಿಗೆ ಮರಣ ನಿಧಿ ಹಾಗೂ ಮರಣ ಸಹಾಯ ನಿಧಿಯನ್ನು ಜಾರಿ ಮಾಡಲಾಗಿದೆ. ಸದಸ್ಯರು ಮೃತಪಟ್ಟ ಸಂದರ್ಭ ಮರಣ ನಿಧಿ ಅಲ್ಲದೇ ಅಂತ್ಯಕ್ರಿಯೆಗೆ ಸಹಕಾರವಾಗುವಂತೆ 2 ಸಾವಿರ ರೂ.ಗಳನ್ನು ನೀಡಲಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಜಿ.ಎನ್. ರಾಮಪ್ಪ, ನಿರ್ದೇಶಕರಾದ ಮನು ಮಹೇಶ್, ಎ.ಡಿ. ದರ್ಶನ್, ಎಸ್.ಸಿ. ಸುರೇಶ್, ಹೆಚ್.ಎನ್.ಕೃಷ್ಣಪ್ಪ, ಪಿ.ಪಿ.ಕಿರಣ್, ಎ.ವಿ.ಅಯ್ಯಪ್ಪ, ಹೆಚ್.ಎನ್. ಕೃಷ್ಣಪ್ಪ, ಹೆಚ್.ಎನ್. ಕಮಲಮ್ಮ, ರುದ್ರಮ್ಮ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net