

ದೇವದುರ್ಗ: ರಾಮಾಯಣ ಕೃತಿ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜೀವನ ಪ್ರತಿಯೊಬ್ಬರಿಗೂ ಮಾದರಿ ಎಂದು ಗಾಣಧಾಳ ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ದೇಸಾಯಿ ಹೇಳಿದರು.
ತಾಲೂಕಿನ ಕಕ್ಕಲದೊಡ್ಡಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಜೀವನದ ಸಂದೇಶ ಸಾರಿದ್ದಾರೆ. ಶ್ರೀರಾಮ ಹಾಗೂ ಸೀತೆಯ ಆದರ್ಶ, ರಾಮ ಲಕ್ಷಣರ ಜೀವನ ಜಗತ್ತಿಗೆ ಪರಿಚಯಿಸಿದ್ದಾರೆ. ಸಮುದಾಯದವರು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರತಿಯೊಬ್ಬರೂ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದರು.
ಪ್ರಮುಖರಾದ ಭೀಮನಗೌಡ ಮಾಲಿಪಾಟೀಲ್, ಯಲ್ಲನಗೌಡ ದಳಪತಿ, ಸುಭಾಷ್ ಚಂದ್ರ ಬೇವಿನಗಿಡ, ಕೊಳಪ್ಪ ದೇಸಾಯಿ, ಚನ್ನಬಸವ ಮಾಲಿಪಾಟೀಲ್, ಚಂದ್ರಕಾಂತ ಬೆನಕನ್, ಶಂಕರ್ ಹೂಗಾರ್, ಶಿವಪ್ಪ ನಾಯಕ, ಸುರೇಶ ನಾಯಕ, ಕರಿಯಪ್ಪ ದೊರೆ, ವೀರೇಶ ನಾಯಕ, ರೆಡ್ಡಿಪ್ಪ ನಾಯಕ, ತಿರುಪತಿ ನಾಯಕ, ಸಾಬಣ್ಣ ದೊರೆ, ರಾಜಸಾಬ್ ಕಕ್ಕಲದೊಡ್ಡಿ ಇತರರಿದ್ದರು.
ವಿವಿಧೆಡೆ ಆಚರಣೆ: ಪಟ್ಟಣದ ಮಿನಿವಿಧಾನಸೌಧದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕ, ಕಂದಾಯ ನಿರೀಕ್ಷಕ ಭೀಮನಗೌಡ, ಪ್ರಮುಖರಾದ ದೇವರೆಡ್ಡಿ, ಪ್ರವೀಣ್, ಅಭಿಷೇಕ ಇದ್ದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಟಿಎಚ್‌ಒ ಡಾ.ಬನದೇಶ್ವರ, ವೈದ್ಯರಾದ ಶಿವಕುಮಾರ, ನಾಗರಾಜ, ಗಂಗಾಧರ್, ಶಿವಪ್ಪ, ಚನ್ನಬಸವ, ಗೀತಮ್ಮ ಇತರರಿದ್ದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಕಚೇರಿ, ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಲಾಯಿತು.