

ಚಿಕ್ಕೋಡಿ: ಮಹರ್ಷಿ ವಾಲ್ಮೀಕಿ ಸಂಸ್ಕೃತದಲ್ಲಿ ಸಾವಿರಕ್ಕೂ ಹೆಚ್ಚಿನ ಕಾವ್ಯ ರಚಿಸಿದ್ದರಿಂದ ಆದಿಕವಿಯಾಗಿ ಪೂಜಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಹೇಳಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಪುರಸಭೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ವಾಲ್ಮೀಕಿ ತಿಳಿಸಿಕೊಟ್ಟಿದ್ದಾರೆ. ವಾಲ್ಮೀಕಿ ರಾಮಾಯಣವನ್ನು ಹಿಂದು ಧರ್ಮಕ್ಕೆ ಅಪ್ರತಿಮ ಕೊಡುಗೆಯಾಗಿ ನೀಡಿದ್ದಕ್ಕೆ ಅವರನ್ನು ಪೂಜಿಸಲಾಗುತ್ತದೆ ಎಂದರು.
ಡಿಡಿಪಿಐ ಸೀತಾರಾಮ ಪ್ರಾಸ್ತಾವಿಕ ಮಾತನಾಡಿದರು. ಸಮಾಜ ಕಲ್ಯಾಣಾಧಿಕಾರಿ ಅರ್ಚನಾ ಸಾನೆ, ತಹಸೀಲ್ದಾರ್ ರಾಜೇಶ ಬುರ್ಲಿ, ಉಪಾಧ್ಯಕ್ಷ ರ್ಇಾನ್ ಬೇಾರಿ, ಪುರಸಭೆ ಸದಸ್ಯರಾದ ರಾಮಾ ಮಾನೆ, ಅನಿಲ ಮಾನೆ, ಚಂದ್ರಕಾಂತ ಬುರುಡ, ನಾಗರಾಜ ಮೇದಾರ, ಪುರಸಭೆ ಸ್ಥಾಯಿ ಸಮಿತಿ ಸದಸ್ಯ ಸಂತೋಷ ಜೊಗಳೆ, ಅತಿಥಿ ಉಪನ್ಯಾಸಕ ಬಿ.ಎ.ಮಗದುಮ್ಮ, ಶಿವಾನಂದ ಶಿರಗಾಂವ, ಅಣ್ಣಾಸಾಹೇಬ ಮೇದಾರ, ಶಿವಾನಂದ ಚನಗೌಡರ ಇತರರಿದ್ದರು.