ವಾಲ್ಮೀಕಿ ರಾಮಾಯಣ ಶ್ರೇಷ್ಠ ಗ್ರಂಥ

web2
ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಸನತ ಜಾರಕಿಹೊಳಿ ಉದ್ಘಾಟಿಸಿದರು. ಕೆ.ಬಿ. ಬಿರಾದಾರ, ಡಾ.ಐ.ಎಸ್. ಪವಾರ, ಡಾ.ಎ.ಬಿ. ಪಾಟೀಲ, ಜಿ.ಆರ್. ನಿಡೋಣಿ ಇತರರಿದ್ದರು.
Published on

ಗೋಕಾಕ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಸರ್ವರಿಗೂ ದಾರಿದೀಪ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.

ನಗರದ ಟ್ರಸ್ಟ್ ಸಭಾಭವನದಲ್ಲಿ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು. ರಾಮಾಯಣ ಜಗತ್ತು ಕಂಡ ಶ್ರೇಷ್ಠ ಪವಿತ್ರ ಗ್ರಂಥ. ದೇಶದ ಇತಿಹಾಸ ರಾಮಾಯಣ. ಅದರಲ್ಲಿನ ಮೌಲ್ಯಗಳನ್ನು ನಾವೆಲ್ಲ ಆಚರಣೆಗೆ ತರೋಣವೆಂದು ಹೇಳಿದರು.

ಅತಿಥಿ ಉಪನ್ಯಾಸಕ ಕೆ.ಬಿ. ಬಿರಾದಾರ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಐ.ಎಸ್. ಪವಾರ, ಡಾ.ಎ.ಬಿ. ಪಾಟೀಲ, ಜಿ.ಆರ್. ನಿಡೋಣಿ, ಎಚ್.ಎಸ್. ಅಡಿಬಟ್ಟಿ, ಆರ್.ಎಸ್. ಪಂಡಿತ, ಎ.ಎಂ. ಸರಕಾವಸ, ಎಚ್.ವಿ. ಪಾಗನೀಸ, ಪಿ.ವಿ. ಚಚಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net