

ಬೈಲಹೊಂಗಲ:ಮಹಾನ್ ಋಷಿಯಾಗಿ ಉತ್ತಮ ಸಂದೇಶ ನೀಡಿದ ಮಹರ್ಷಿ ವಾಲ್ಮೀಕಿ ಪ್ರತಿಯೊಬ್ಬರೂ ಪೂಜಿಸುವಂತಹ ಕವಿ. ಶ್ರೇಷ್ಠ ಕೃತಿ ರಾಮಾಯಣ ಮೂಲಕ ಅವರು ಜನಮಾನಸದಲ್ಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ತಾಪಂ ಸಭಾಭವನದಲ್ಲಿ ತಾಲೂಕಾಡಳಿತ, ತಾಪಂ, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮುನವಳ್ಳಿಯ ಎಸ್ಪಿಜೆಜೆ ಕಾಲೇಜಿನ ಉಪನ್ಯಾಸಕ ಮಾಲತೇಶ ಮಕರವಳ್ಳಿ ಮಾತನಾಡಿ, ವಾಲ್ಮೀಕಿ ಹಾಕಿಕೊಟ್ಟ ಸನ್ಮಾರ್ಗ ದಾರಿ ದೀಪವಾಗಿದೆ ಎಂದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಪುರಸಭೆ ಅಧ್ಯ ವಿಜಯ ಬೋಳಣ್ಣವರ, ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಮುಖ್ಯಾಧಿಕಾರಿ ವೀರೇಶ ಹಸಬಿ, ಸ್ಥಾಯಿ ಸಮಿತಿ ಅಧ್ಯೆ ಹೇಮಲತಾ ಹಿರೇಮಠ, ಮಂಜುನಾಥ ಮಕರವಳ್ಳಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ, ತಾಪಂ ಇಒ ಸಂಜೀವ ಜುನ್ನೂರು, ಪ್ರಭಾರಿ ೇತ್ರ ಶಿಣಾಧಿಕಾರಿ ಬಿ.ಎನ್.ಕಸಾಳೆ, ಪುರಸಭೆ ಸದಸ್ಯೆ ವಾಣಿಶ್ರೀ ಪತ್ತಾರ, ಶ್ರೀದೇವಿ ದೇವಲಾಪುರ, ಅಂಬಿಕಾ ಕೊಟಬಾಗಿ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯ ಪ್ರಮೋದಕುಮಾರ ವಕ್ಕುಂದಮಠ, ವಿವೇಕಾನಂದ ಪೂಜೇರ, ಮಲ್ಲಿಕಾರ್ಜುನ ಕಿತ್ತೂರು, ಅಶೋಕ ಬಂಡಾರಿ, ರವಿ ಸೋಮಾಪೂರ, ಗೊಳಪ್ಪ ಕೇಂದ್ರಿ, ನವೀನ ಗುರಗುದ್ದಿ, ದೇಮಣ್ಣ ತಳವಾರ ಇತರರಿದ್ದರು.