ವಾಲ್ಮೀಕಿ ಮಹರ್ಷಿ ಮೂರ್ತಿ ಮೆರವಣಿಗೆ

Valmiki Maharshi statue procession
ಇಳಕಲ್ಲದಲ್ಲಿ ಮಹರ್ಷಿ ವಾಲ್ಮೀಕಿ ಕಂಚಿನ ಮೂರ್ತಿ ಭವ್ಯ ಮೆರವಣಿಗೆ ನಡೆಯಿತು.
Published on

ಇಳಕಲ್ಲ(ಗ್ರಾ): ನಗರದ ಮಹರ್ಷಿ ವಾಲ್ಮೀಕಿ ಮಂದಿರದಲ್ಲಿ ೆ.2ರಂದು ಕಂಚಿನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಅದರ ಅಂಗವಾಗಿ ಮೂರ್ತಿ ಮೆರವಣಿಗೆ ಶನಿವಾರ ನಡೆಯಿತು.

ಬಸವನಗರದ ಗಣೇಶ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಲ್ಮೀಕಿ ದೇವಸ್ಥಾನ ತಲುಪಿತು. 250ಕ್ಕೂ ಅಧಿಕ ಮಹಿಳೆಯರು ಕುಂಭಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆ ನೇತೃತ್ವವನ್ನು ಧರ್ಮದರ್ಶಿ ಶಾಂತಕುಮಾರ, ಸಮಾಜದ ಮುಖಂಡರಾದ ದುರಗೂಜಿ ಸುರಪುರ, ಚಂದ್ರು ತಳವಾರ, ಸೋಮು ಬಲಕುಂದಿ, ವೆಂಕಣ್ಣ ತಪ್ಪಲದಡ್ಡಿ, ಹನುಮಂತ ವಾಲಿಕಾರ, ಮಂಜು ಕಿಡದೂರ, ಮಹಾಂತೇಶ ಬಂಡಿ, ಮಂಜುನಾಥ ಕಟಗಿ, ಪಾಂಡು ಬಾರಿಗಿಡದ, ಮುದಿಯಪ್ಪ ಪೂಜಾರಿ ಮತ್ತಿತರರು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net