ರಾಮಾಯಣದ ಸಂದೇಶ ಸಾರ್ವಕಾಲಿಕ : ರವೀಂದ್ರ ರೈ ಕಲ್ಲಿಮಾರ್ ಅಭಿಪ್ರಾಯ

vv
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕ್ರೌಂಚಪಕ್ಷಿಗಳ ಮೇಲಾದ ಬಾಣಾಘಾತ ವಾಲ್ಮಿಕಿಯಲ್ಲಿ ಉಂಟು ಮಾಡಿದ ಸಂವೇದನೆ ರಾಮಾಯಣದ ಸೃಷ್ಟಿಗೆ ಕಾರಣವಾಯಿತು ಎಂದು ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್ ಹೇಳಿದರು.

ಮಂಗಳೂರು ವಿವಿಯ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ದಲ್ಲಿ ಉಪನ್ಯಾಸ ನೀಡಿದರು.

ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ, ಜನರನ್ನು ದರೋಡೆ ಮಾಡುತ್ತಿದ್ದ ಬೇಡ ವಾಲ್ಮಿಕಿ ಮನಃಪರಿವರ್ತನೆಗೊಂಡು ಹಿಂಸೆಯಿಂದ ಕರುಣೆಯ ಕಡೆಗೆ ಹೊರಳಿದ ಬಳಿಕ ಸೃಷ್ಟಿಯಾದ ರಾಮಾಯಣದ ನೂರು ಸಂದೇಶಗಳು ಇಂದಿಗೂ ಪ್ರಸ್ತುತ. ತಾಯಿನಾಡು, ಸತ್ಯ, ಏಕಾಗ್ರತೆ ಮೊದಲಾದ ಮೌಲ್ಯಗಳು ನಮಗೆ ಆದರ್ಶ ಎಂದರು.

ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಸೋಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಲ್ಮೀಕಿ ರಾಮಾಯಣದ ಪ್ರೇರಣೆಯಿಂದ ಅನೇಕ ರಾಮಾಯಣಗಳು ಹುಟ್ಟಿವೆ. ಕನ್ನಡದಲ್ಲಿ ಜೈನ ರಾಮಾಯಣಗಳಿಂದ ತೊಡಗಿ ಜಾನಪದ ರಾಮಾಯಣ, ಕುವೆಂಪು ಅವರ ರಾಮಾಯಣ ದರ್ಶನಂವರೆಗೆ ಅದರ ಹರವು ವಿಸ್ತಾರವಾದುದು ಎಂದರು.

ಕನ್ನಡ ಪ್ರಾಧ್ಯಾಪಕರಾದ ಪ್ರೊ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಚಂದ್ರಶೇಖರ ಎಂ.ಬಿ. ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ವಿನಾಯಕ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net