ವಾಲ್ಮೀಕಿ ಜಯಂತಿ ಸರಳ ಆಚರಣೆ

MDG sabhe
Published on

ಮುಂಡರಗಿ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ಪಟ್ಟಣದಲ್ಲಿ ತಹಸೀಲ್ದಾರ್ ಧನಂಜಯ್ ಎಂ. ಅಧ್ಯಕ್ಷತೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ಜರುಗಿತು. ತಾಲೂಕಿನಲ್ಲಿ ಬರ ಪರಿಸ್ಥಿತಿ ಇದ್ದು ಅದ್ದೂರಿ ಆಚರಣೆ ಮಾಡದೆ ಸರಳವಾಗಿ ಆಚರಿಸಲು ಒಮ್ಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಮಣ್ಣ ಕೋಳಿ, ಗರುಡಪ್ಪ ಜಂತ್ಲಿ, ಮೈಲಾರಪ್ಪ ಕಲಕೇರಿ, ವಿಜಯಕುಮಾರ ರಾಟಿ, ಗಣೇಶ ಭರಮಕ್ಕನವರ ಮೊದಲಾದವರು ಮಾತನಾಡಿ, ತಾಲೂಕಿನಲ್ಲಿ ಬರ ಸ್ಥಿತಿ ಇದೆ. ತಹಸೀಲ್ದಾರ್ ಕಚೇರಿಯಲ್ಲಿ ಅ.28ರಂದು ಸಾಂಕೇತಿಕವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಜತೆಗೆ ತಾಲೂಕಿನ ಎಲ್ಲ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಸ್ಟಿ ಸಮುದಾಯ ವಿದ್ಯಾರ್ಥಿಗಳಿಗೆ ಸಹಾಯ ಧನದೊಂದಿಗೆ ಪುರಸ್ಕಾರ, ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಬಗ್ಗೆ ಮತ್ತು ಹತ್ತನೇಯ ತರಗತಿ ವಿದ್ಯಾರ್ಥಿಗಳಿಗೆ ಮಹರ್ಷಿ ವಾಲ್ಮೀಕಿ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲು ಸಲಹೆ ನೀಡಿದರು.

ಕನಕಪ್ಪ ಕಾತರಕಿ, ಅಡಿವೆಪ್ಪ ಚಲವಾದಿ, ವೆಂಕಟೇಶ ಬಂಡೆಣ್ಣವರ, ಶ್ರೀನಿವಾಸ ಕೊರ್ಲಗಟ್ಟಿ, ಸುರೇಶ ಕಲ್ಲಕುಟಗರ, ಸುರೇಶ ಮಾಗಡಿ, ಶಿವಾನಂದ ಇಟಗಿ, ಬಸವರಾಜ ನವಲಗುಂದ, ಸುರೇಶ ಹಲವಾಗಲಿ, ಪ್ರಕಾಶ ಹಲವಾಗಲಿ, ಮಂಜುನಾಥ ಮುಧೋಳ, ರಾಜಾಭಕ್ಷಿ ಬೆಟಗೇರಿ, ಈರಣ್ಣ ಜಲ್ಲಿಗೇರಿ, ಮೇಘರಾಜ ನಾಯಕ, ಲಕ್ಷ್ಮಣ ಬೂದಿಹಾಳ, ಪ್ರಾ.ಎಸ್.ಆರ್. ಚಿಗರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net