ತಾಲೂಕಾಡಳಿತದಿಂದ ವಾಲ್ಮೀಕಿ ಜಯಂತಿ ಆಚರಣೆ

New Project (12)
Published on

ಕಡಬ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಕಡಬ ತಾಲೂಕು ಆಡಳಿತ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಮಂಗಳವಾರ ಆಚರಿಸಲಾಯಿತು.

ಕಡಬ ತಾಲೂಕು ತಹಸೀಲ್ದಾರ್ ಪ್ರಭಾಕರ ಖಜೂರೆ ಉದ್ಘಾಟಿಸಿದರು. ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್, ಪಂಚಾಯಿತಿ ಮುಖ್ಯಧಿಕಾರಿ ಲೀಲಾವತಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಶಿಕ್ಷಣ ಇಲಾಖೆಯ ನೂಜಿಬಾಳ್ತಿಲ ಸಿಆರ್‌ಪಿ ಗಣೇಶ್ ನಡುವಾಲ್ ಮಾನಾಡಿದರು.

ಕಡಬ ಸರ್ಕಾರಿ ಪ್ರೌಢಶಾಲಾ ಉಪಪ್ರಾಂಶುಪಾಲೆ ಡಾ.ವೇದಾವತಿ, ಕಡಬ ತಾಲೂಕು ಆಡಳಿತ ಕಚೇರಿ ಉಪತಹಸೀಲ್ದಾರ್‌ರಾದ ಸಯ್ಯದ್ದುಲ್ಲ ಖಾನ್, ವೆಂಕಟೇಶ್, ಸರ್ವೇ ಇಲಾಖೆ ಸೂಪರ್‌ವೈಸರ್ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಲೋಕೇಶ್ ಇದ್ದರು. ಉಪತಹಸೀಲ್ದಾರ್ ಗೋಪಾಲ್ ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net