ಎಲ್ಲ ಕಾಲಕ್ಕೂ ಶ್ರೇಷ್ಠ ಮಹಾಕಾವ್ಯರಾಮಾಯಣ

Valmiki Jayanti at Government Employees Office
ಸರ್ಕಾರಿ ನೌಕರರ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ವಾಲ್ಮೀಕಿ ರಾಮಾಯಣ ಮನುಕುಲದ ಸ್ಫೂರ್ತಿಯಾಗಿದ್ದು, ಎಲ್ಲ ಕಾಲಕ್ಕೂ ಶ್ರೇಷ್ಠವಾದ ಮಹಾಕಾವ್ಯವಾಗಿದೆ ಎಂದು ಮಹರ್ಷಿ ವಾಲ್ಮೀಕಿ ನಾಯಕ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಮುನಿರಾಜ್ ತಿಳಿಸಿದರು.
ನಗರದ ಸರ್ಕಾರಿ ನೌಕರರ ಕಚೇರಿಯಲ್ಲಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅಲ್ಲಭಕ್ಷ್ ಮಾತನಾಡಿ, ರಾಮಾಯಣದ ಆಶಯದಂತೆ ಜಾತಿ, ಧರ್ಮ ಬದಿಗೊತ್ತಿ ಪ್ರತಿಯೊಬ್ಬರೂ ಮನುಷ್ಯರಾಗಿ ಬದುಕೋಣ ಎಂದರು. ಉಪನ್ಯಾಸಕ ಶಂಕರಪ್ಪ ಮಾತನಾಡಿ, ರಾಮಾಯಣ ಮನುಜ ಕುಲಕ್ಕೆ ನೀಡಿದ ಮಹಾ ಕಾವ್ಯವಾಗಿದ್ದು, ಮಕ್ಕಳಿಗೆ ರಾಮಾಯಣದ ಬಗ್ಗೆ ತಿಳಿವಳಿಕೆ ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ತಾಲೂಕು ಗೌರವಾಧ್ಯಕ್ಷ ಸುಬ್ಬರಾಯಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಶಾಮಣ್ಣ, ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳಾದ ಮುನಿರಾಜ್, ಅನಂತ ರಾಮ್, ರಾಜು, ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net