ಕಾವೇರಿ ನೀರಾವರಿ ನಿಗಮದಲ್ಲಿ ವಾಲ್ಮೀಕಿ ಜಯಂತ್ಯುತ್ಸವ

07-10-25--krs1
ಕೆ.ಆರ್.ಸಾಗರ ಕಾವೇರಿ ನೀರಾವರಿ ಕಚೇರಿಯಲ್ಲಿನ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಲೋಹಿತ್, ಅಭಿಲಾಷ್, ಸಹನಾ, ಶ್ರೀನಿವಾಸ್ ಇದ್ದರು.
Published on

ಕೆ.ಆರ್.ಸಾಗರ: ಕೆ.ಆರ್.ಸಾಗರ ಕಾವೇರಿ ನೀರಾವರಿ ಕಚೇರಿಯಲ್ಲಿನ ಸಭಾಂಗಣದಲ್ಲಿ ಮಂಗಳವಾರ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

ಹೂಗಳಿಂದ ಅಲಂಕರಿಸಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಇಇ ಜಯಂತ್ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು, ವಾಲ್ಮೀಕಿ ಅವರ ಗ್ರಂಥ ಕೇವಲ ನಮ್ಮ ದೇಶಕ್ಕೆ ಸೀಮಿತವಾಗಿಲ್ಲ. ಪ್ರಪಂಚದೆಲ್ಲೆಡೆ ಇವರ ಗ್ರಂಥವನ್ನು ಪಾಲನೆ ಮಾಡಿದ್ದು, ಮಹರ್ಷಿ ವಾಲ್ಮೀಕಿ ನಿರೂಪಿಸಿದ ಆದರ್ಶ, ಮೌಲ್ಯ ಸಾರ್ವಕಾಲಿಕವಾದದ್ದು. ಇಂದಿನ ಯುವ ಪೀಳಿಗೆ ಈ ತರಹ ಗ್ರಂಥಗಳನ್ನು ಓದಬೇಕು, ವ್ಯಕ್ತಿ ತನ್ನಲ್ಲಿನ ದುಷ್ಟತನ ಬಿಟ್ಟು ಒಳ್ಳೆಯತನದಲ್ಲಿ ಜೀವನ ನಡೆಸಲಿ ಎಂದು ಈ ದಿನದ ಆಚರಣೆ ಮಹತ್ವ ಎಂದರು.

ಎಇಇ ಲೋಹಿತ್, ಕೆ.ಆರ್.ಸಾಗರ ಕಾ.ನೀ.ನಿಗಮದ ಇಂಜಿನಿಯರ್‌ಗಳಾದ ಅಭಿಲಾಷ್, ಸಹನಾ, ಲೆಕ್ಕ ಮುಖ್ಯಾಧಿಕಾರಿ ಶ್ರೀನಿವಾಸ್, ಕೆ.ಆರ್.ಸಾಗರ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಖಜಾಂಚಿ ನಾಗೇಶ್, ಸಿಬ್ಬಂದಿ ಜಯಪ್ರಕಾಶ್, ಶಿವಕುಮಾರ್, ಮಾಥ್ಯೂ, ಕೆಂಪ, ಚಂದ್ರು, ಇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net