

ಗುಂಡ್ಲುಪೇಟೆ: ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಇಂದಿಗೂ ದೇಶದ ಮಹಾನ್ ಆದರ್ಶವಾಗಿದೆ ಎಂದು ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್ ಕುಮಾರ್ ಹೇಳಿದರು.
ಪಟ್ಟಣದ ಸಾರಿಗೆ ಡಿಪೋದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಸೃಷ್ಟಿಸಿರುವ ಪ್ರತಿ ಪಾತ್ರವೂ ತನ್ನದೇ ಆದ ವಿಭಿನ್ನತೆ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಪುಟ್ಟರಾಜು, ಸಮಿತಿಯ ಅಧ್ಯಕ್ಷ ಎಸ್.ವಿಠಲ, ಗೌರವಾಧ್ಯಕ್ಷರಾದ ಕೃಷ್ಣನಾಯಕ, ಮಹೇಶ್ ಹೊಸೂರು, ವಿಭಾಗಿಯ ಸಂಚಲನ ಅಧಿಕಾರಿ ಹೇಮಂತ್, ಸಹಾಯಕ ಸಂಚಾರ ಅಧಿಕ್ಷಕ ಹರೀಶ್ ಕುಮಾರ್, ಸಂಚಾರ ನಿರೀಕ್ಷಕ ಉಮ್ಮತ್ತೂರಯ್ಯ, ಸಿಬ್ಬಂದಿ ಪಾಂಡು, ಚಂದ್ರು, ವೆಂಕಟೇಶ, ರೇವಣ್ಣ ಇತರರು ಇದ್ದರು.