ವಾಲ್ಮೀಕಿ ರಾಮಾಯಣ ಆದರ್ಶದ ಪ್ರತೀಕ

22 RON 1
Published on

ರೋಣ: ಮಹರ್ಷಿ ವಾಲ್ಮೀಕಿಯವರು ಭಾರತದ ಮಹಾನ್ ಕವಿಯಾಗಿ ರಾಮಾಯಣದಂತಹ ಶ್ರೇಷ್ಠ ಗ್ರಂಥವನ್ನು ನಮಗೆ ನೀಡಿದ್ದಾರೆ. ಅದನ್ನು ಅರಿತು ನಾವು ಬೆಳೆಯಬೇಕು ಎಂದು ರೋಣ ಪುರಸಭೆ ಸದಸ್ಯ ಮಿಥುನ್ ಪಾಟೀಲ ಹೇಳಿದರು.

ಸೋಮವಾರ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮಹಾ ಗ್ರಂಥವನ್ನು ಮಹರ್ಷಿ ವಾಲ್ಮೀಕಿ ನಮಗೆ ನೀಡಿದ್ದಾರೆ. ಅವರ ಆದರ್ಶ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು, ಜಯಂತಿಗಳನ್ನು ಆಚರಣೆ ಮಾಡುವುದರ ಹಿಂದೆ ಮಹತ್ವ ಇರುತ್ತದೆ. ದಾರ್ಶನಿಕರ ಜೀವನಚರಿತ್ರೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯ ಜಯಂತಿ ಆಚರಣೆಯ ಮುಖಾಂತರವಾಗಬೇಕು ಎಂದು ಹೇಳಿದರು.

ಶಿಕ್ಷಣದಿಂದಲೇ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ನನೆಗುದಿಗೆ ಬಿದ್ದಿರುವ ವಾಲ್ಮೀಕಿ ಭವನ ನಿರ್ಮಾಣವನ್ನು ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸಲು ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.

ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ತಳವಾರ, ಗಜೇಂದ್ರಗಡ ಘಟಕದ ಅಧ್ಯಕ್ಷ ಹನಮಂತಪ್ಪ ಹಟ್ಟಿಮನಿ, ಬಸವಂತಪ್ಪ ತಳವಾರ, ಜಿಪಂ ಮಾಜಿ ಉಪಾಧ್ಯಕ್ಷ ಮಂಜುಳಾ ಹುಲ್ಲಣ್ಣವರ, ಅನಿಲ ಸಿದ್ದಮ್ಮನಹಳ್ಳಿ, ಪುರಸಭೆ ಸದಸ್ಯ ಸಂತೋಷ ಕಡಿವಾಲ, ತಹಸೀಲ್ದಾರ್ ನಾಗರಾಜ ಕೆ., ತಾಪಂ ಇಒ ಮಂಜುಳಾ ಹಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರ, ಬಿಇಒ ರುದ್ರಪ್ಪ ಹುರಳಿ, ಪಿ.ಎಚ್. ಕಡಿವಾಲ, ಶ್ರೀಧರ ನಾಯಕ, ಲಕ್ಷ್ಮಣ ಗೌಡಣ್ಣವರ, ಶೇಖಪ್ಪ ಜುಟ್ಲ, ಕುಮಾರ ಗೌಡಣ್ಣವರ, ಸಂಜಯ ದೊಡ್ಡಮನಿ, ಬಲವಂತ ನಾಯಕ, ಎಲ್.ಆರ್. ನಾಯಕ, ಇತರರಿದ್ದರು. ಡಾ. ಶರಣು ಮುಷ್ಠಿಗೇರಿ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net