ಜಗತ್ತಿಗೆ ರಾಮಾಯಣ ಪರಿಚಯಿಸಿದ ವಾಲ್ಮೀಕಿ

ilk 17-1 rural
ಇಳಕಲ್ಲದ ವಾಲ್ಮೀಕಿ ದೇವಸ್ಥಾನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಮಾಲಾರ್ಪಣೆ ಮಾಡಿದರು. ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲರಜಾಕ ತಟಗಾರ, ನಾಮನಿರ್ದೇಶಿತ ಸದಸ್ಯ ಮಲ್ಲು ಮಡಿವಾಳರ ಇತರರಿದ್ದರು.
Published on

ಇಳಕಲ್ಲ.(ಗ್ರಾ): ರಾಮಾಯಣ ರಚಿಸಿ ಇಡೀ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಮಹಾನ್ ಮಹರ್ಷಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದ ವಾಲ್ಮೀಕಿ ದೇವಾಲಯದಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಬೇಡನಾಗಿ ಹುಟ್ಟಿ ಕೊನೆಗೆ ಮಹರ್ಷಿಯಾಗಿ ಮನುಕುಲಕ್ಕೆ ರಾಮಾಯಣ ನೀಡಿದ ಅವರನ್ನು ನೆನೆವುದೇ ಒಂದು ಪುಣ್ಯದ ಕೆಲಸ ಎಂದು ಹೇಳಿದರು.

ಗುರುಮಹಾಂತಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಕೆಪಿಸಿಸಿ ಸದಸ್ಯ ಶಾಂತಕುಮಾರ ಸುರಪುರ, ತಹಸೀಲ್ದಾರ್ ಸತೀಶ ಕೂಡಲಗಿ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಹಾಗೂ ನಗರಸಭೆ ಸದಸ್ಯರು ಹಾಗೂ ಸಮಾಜದ ಹಿರಿಯರು, ಮುಖಂಡರು, ಯುವಕರು, ಮಹಿಳೆಯರು ಇದ್ದರು. ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಕಚೇರಿ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ವಾಲ್ಮೀಕಿ ಭಾವಚಿತ್ರಕ್ಕೆ ತಹಸೀಲ್ದಾರ್ ಸತೀಶ ಕೂಡಲಗಿ ಪೂಜೆ ಸಲ್ಲಿಸಿದರು. ಉಪತಹಸೀಲ್ದಾರ್ ಈಶ್ವರ ಗಡ್ಡಿ ಸೇರಿ ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಗರಸಭೆ ಕಚೇರಿ: ಇಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಗರಸಭೆ ಸದಸ್ಯರಾದ ಆಫ್ರೀನ್ ಸೋನಾರ, ಹನುಮಂತ ತುಂಬದ ಮುಖಂಡ ವಿಠ್ಠಲ ಜಕ್ಕಾ ಇದ್ದರು.

ಕಾಂಗ್ರೆಸ್ ಕಚೇರಿ: ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಪುಷ್ಪಾರ್ಪನೆ ಮಾಡಿದರು. ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲರಜಾಕ ತಟಗಾರ, ನಾಮನಿರ್ದೇಶಿತ ಸದಸ್ಯ ಮಲ್ಲು ಮಡಿವಾಳರ, ವಾಲ್ಮೀಕಿ ಸಮಾಜದ ಮುಖಂಡ ಮಂಜುನಾಥ ಕಟಗಿ, ಅಕ್ಷಯ ತಳವಾರ, ಶಂಕ್ರಪ್ಪ ವಾಲಿಕಾರ, ವೆಂಕಣ್ಣ ತಪ್ಪಲದಡ್ಡಿ ಮತ್ತು ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net