3 ತಿಂಗಳಲ್ಲಿ ವಾಲ್ಮೀಕಿ ಭವನ ಪೂರ್ಣ

08 10 2025_BGR_RURAL-PAGE_03
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮೆಳೆಕೋಟೆಯ ವಾಲ್ಮೀಕಿ ಶಾಖಾ ಮಠದ ಶ್ರೀಬ್ರಹ್ಮನಾಥಸ್ವಾಮೀಜಿ ಮಾತನಾಡಿದರು. ಶಾಸಕ ಧೀರಜ್​ ಮುನಿರಾಜು, ತಹಸೀಲ್ದಾರ್​ ವಿಭಾವಿದ್ಯಾರಾಠೋಡ್​, ಸಂದ ಗೌರವಾಧ್ಯಕ್ಷ ಮುನಿಕೃಷ್ಣಪ್ಪ, ಅಧ್ಯಕ್ಷ ಪ್ರೇಮ್​ಕುಮಾರ್​, ಸಮಾಜದ ಮುಖಂಡರಾದ ಸಂಜೀವನಾಯಕ್​, ಕುಮಾರ್​, ಬಾಲಪ್ಪ, ದೇವರಾಜಮ್ಮ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಪಿಎನ್​ ಶೇಷಾದ್ರಿ, ತಾಪಂ ಇಒ ಮಂಜುನಾಥ ಹರ್ತಿ ಇದ್ದರು.
Published on

ದೊಡ್ಡಬಳ್ಳಾಪುರ : ನಗರದ ತೇರಿನ ಬೀದಿ ಬಳಿ ಅರ್ಧಕ್ಕೆ ನಿಂತಿರುವ ವಾಲ್ಮೀಕಿ ಭವನವನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಮುಂದಿನ ವರ್ಷದ ಜಯಂತಿಯನ್ನು ವಾಲ್ಮೀಕಿ ಭವನದಲ್ಲಿಯೇ ಆಚರಿಸಲಾಗುವುದು ಎಂದು ಶಾಸಕ ಧೀರಜ್​ ಮುನಿರಾಜು ತಿಳಿಸಿದರು. ನಗರದ ಡಾ.ಬಿ.ಆರ್​ ಅಂಬೇಡ್ಕರ್​ ಭವನದಲ್ಲಿ ರಾಷ್ಟಿ$ಯ ಹಬ್ಬಗಳ ಆಚರಣಾ ಸಮಿತಿ, ಪರಿಶಿಷ್ಟ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ಜಗತ್ತಿನ ಎಲ್ಲ ದೇಶಗಳಲ್ಲಿ, ಎಲ್ಲ ಭಾಷೆಗಳಲ್ಲಿ ವಾಲ್ಮೀಕಿಯವರ ಮಹಾಭಾರತ ಮತ್ತು ರಾಮಾಯಣ ಕೃತಿಗಳು ಲಭ್ಯವಿದೆ. ಎಲ್ಲರೂ ವಾಲ್ಮೀಕಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಮೆಳೆಕೋಟೆಯ ವಾಲ್ಮೀಕಿ ಶಾಖಾ ಮಠದ ಶ್ರೀ ಬ್ರಹ್ಮನಾಥಸ್ವಾಮೀಜಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ತತ್ವಗಳನ್ನ ಇಂದಿನ ಪೀಳಿಗೆಗೆ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡುವ ಗೌರವವಾಗಿದೆ ಎಂದರು. ಮುಖಂಡ ಸಂಜೀವ ನಾಯಕ್​ ಮಾತನಾಡಿ, ಪರಿಶಿಷ್ಟ ವರ್ಗಕ್ಕೆ ಕುರುಬ ಸಮುದಾಯ ಸೇರ್ಪಡೆ ಮಾಡಬಾರದು, ಸಿಎಂ ಸಿದ್ದರಾಮಯ್ಯ ನಿಲುವನ್ನು ಎಸ್​.ಟಿ ಸಮುದಾಯದ 14 ಕಾಂಗ್ರೆಸ್​ ಶಾಸಕರು ಖಂಡಿಸಬೇಕು ಎಂದರು.

ಬೆಳ್ಳಿರಥದಲ್ಲಿ ಮೆರವಣಿಗೆ : ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಬಳಿಕ ಅಂಬೇಡ್ಕರ್​ ಭವನದವರೆಗೆ ವಾಲ್ಮೀಕಿ ಶ್ರೀಗಳ ಭಾವಚಿತ್ರವುಳ್ಳ ಬೆಳ್ಳಿರಥ ಮೆರವಣೆಗೆ ನಡೆಯಿತು. ವಿವಿಧ ಜನಪದ ಕಲಾತಂಡಗಳು ಗಮನಸೆಳೆಯಿತು.

ಶಾಸಕರು ಧೀರಜ್​ ಮುನಿರಾಜು ವಾಲ್ಮೀಕಿ ಭವನಕ್ಕೆ 25 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿ ಅರ್ಧಕ್ಕೆ ನಿಂತಿರುವ ಭವನದ ಕಾಮಗಾರಿಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಸಮಾಜದ ಸಂಟನೆಯನ್ನು ಮತ್ತಷ್ಟು ಹೆಚ್ಚಿಸಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಾಧನೆ ಮಾಡಲು ಯುವ ಜನರನ್ನ ಪ್ರೋತ್ಸಾಹಿಸಲಾಗುವುದು.

> ಮುನಿಕೃಷ್ಣಪ್ಪ ವಾಲ್ಮೀಕಿ ಸಂದ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net