

ಬಾದಾಮಿ: ಮಹರ್ಷಿ ವಾಲ್ಮೀಕಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ತತ್ವಗಳು ಎಲ್ಲರಿಗೂ ಮಾದರಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ನಗರದ ಬಸ್ ಘಟಕದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರು ಹಾಗೂ ಆಡಳಿತ ವರ್ಗದವರಿಂದ ಭಾನುವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಮತ್ತು ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪಿ.ಎಚ್. ಕಡಿವಾಲ ಉಪನ್ಯಾಸ ನೀಡಿದರು.
ಸಾಹಿತಿ ಸದಾಶಿವ ಮರಡಿ, ಮುಖಂಡರಾದ ಸಿದ್ದಣ್ಣ ತಳವಾರ, ಗ್ರಾಪಂ ಸದಸ್ಯ ಬಸವರಾಜ ತಳವಾರ, ಪ್ರಭಾರಿ ಘಟಕ ವ್ಯವಸ್ಥಾಪಕ ಆರ್.ಸಿ. ಖೇಡರ, ಸಿಬ್ಬಂದಿ ಶಿವು ಮಣ್ಣೂರ, ರವೀಂದ್ರ ತಳವಾರ, ರಮೇಶ ಲೆಂಕೆನ್ನವರ, ರಮೇಶ ಬಸರಕೋಡ, ಸಿ.ಎಲ್. ಹೂಲಗೇರಿ, ಎಸ್.ವೈ. ಪಾಟಿಲ, ಎಸ್.ಎಂ. ಮಠಪತಿ, ಮಾರುತಿ ಚಿಮಲ್, ಶಿವು ಚಿಮಲ್, ತಿಪ್ಪಣ್ಣ ನೀರಲಕೇರಿ, ಯಲ್ಲಪ್ಪ ಕುರಿ ಕಾರ್ಮಿಕ ಮುಖಂಡ ಭೀಮರಾವ ಕುಲಕರ್ಣಿ ಸಿಬ್ಬಂದಿ ಹಾಜರಿದ್ದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರನ್ನು ಸಂಸ್ಥೆ ಪರ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮೀಣ ಭಾಗಗಳಲ್ಲಿ ವಾಸ್ತವ್ಯ ಮಾಡುವವರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಸಾರಿಗೆ ಸಿಬ್ಬಂದಿ ಶಾಸಕರಿಗೆ ಮನವಿ ಸಲ್ಲಿಸಿದರು.