ಉದ್ಯಮಕ್ಕೆ ಅಗತ್ಯ ಸ್ಪಷ್ಟ ಗುರಿ :ಅವಿನಾಶ ರಾವ್ ಸಲಹೆ

New Project (21)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉದ್ಯಮಶೀಲರಾಗಬೇಕಾದರೆ ಸಂವಹನ ಕೌಶಲ ಇರಬೇಕು. ಉದ್ಯಮಿ ಉದ್ಯಮದ ಲಾಭ-ನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಇರಬೇಕು. ಉದ್ಯಮಕ್ಕೆ ಒಂದು ಸರಿಯಾದ ದೃಷ್ಟಿಕೋನ, ಪ್ರಾಮಾಣಿಕತೆ ಇರಬೇಕು. ಸ್ವಷ್ಟವಾದ ಗುರಿ, ಉದ್ದೇಶ ಇದ್ದು, ಪ್ರಾಮಾಣಿಕರಾಗಿದ್ದರೆ ಬೇರೆ ಬೇರೆ ಮೂಲಗಳಿಂದ ಹಣಕಾಸು ನೆರವು ಬರುತ್ತದೆ. ಹಣಕಾಸಿನ ನಿರ್ವಹಣೆಯ ಸರಿಯಾದ ಲೆಕ್ಕಚಾರ ಇಟ್ಟುಕೊಳ್ಳಬೇಕು ಎಂದು ನಿಡ್ಲೆ ಅಗ್ರಿಲೀಫ್ ಎಕ್ಸಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅವಿನಾಶ ರಾವ್ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 13 ದಿನ ನಡೆದ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತ್ತರಿಸಿ ಮಾತನಾಡಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಶೋಕ ಕುಮಾರ್ ಸ್ವಉದ್ಯೋಗಕ್ಕೆ ಬೇಕಾದ ಮಾಹಿತಿ ಮಾರ್ಗದರ್ಶನ ನೀಡಿದ ರುಡ್‌ಸೆಟ್ ಸಂಸ್ಥೆಯ ಕಾರ್ಯವನ್ನು ಅಭಿನಂದಿಸಿದರು.

ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ನಿರೂಪಿಸಿದರು. ಕೆ.ಕರುಣಾಕರ ಜೈನ್ ವಂದಿಸಿದರು. 33 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಮನದ್ವಂತರ ಸಾಗರ, ನಿಸರ್ಗ ತರಬೇತಿಯ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net