

ಭಾಗಮಂಡಲ:
ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಮೂರ್ನಾಡುವಿನಲ್ಲಿ ಈಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ಬಾಲಕರ ತಂಡ ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ, ಬಾಲಕಿಯರ ಹ್ಯಾಂಡ್ ಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ರಿಲೇ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಬಾಲಕರ ಹ್ಯಾಂಡ್ ಬಾಲ್ ಪ್ರಥಮ, ಥ್ರೋ ಬಾಲ್ ದ್ವಿತೀಯ, ಬಾಲಕಿಯರ ಹ್ಯಾಂಡ್ ಬಾಲ್ ಪ್ರಥಮ, ಥ್ರೋ ಬಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಚೇತನ್ ಜಾವೆಲಿನ್ ಥ್ರೋ ದ್ವಿತೀಯ, 200 ಮೀಟರ್ ಓಟ ದ್ವಿತೀಯ, ಶರಣಬಸವ ಟ್ರಿಪಲ್ ಜಂಪ್ ದ್ವಿತೀಯ, ದೀಕ್ಷಿತ್ ಚೆಸ್ ನಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪದವಿಪೂರ್ವ ವಿದ್ಯಾರ್ಥಿಗಳು ಬಾಲಕರ ವಿಭಾಗದ ಕಬ್ಬಡಿಯಲ್ಲಿ ಪ್ರಥಮ, ಹ್ಯಾಂಡ್‌ಬಾಲ್‌ನಲ್ಲಿ ದ್ವಿತೀಯ, ಬಾಲಕಿಯರ ಹ್ಯಾಂಡ್‌ಬಾಲ್‌ನಲ್ಲಿ ದ್ವಿತೀಯ, ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲ ಲೋಕೇಶ್, ನಿಲಯಪಾಲಕ ದೀಪಕ್ ಕೆ. ಕೆ., ದೈಹಿಕ ಶಿಕ್ಷಣ ಶಿಕ್ಷಕ ಪವನ್ ಸಾಗರ್ ಕೆ.ಪಿ. ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.