ವಾಜಪೇಯಿ ಜೀವನ ಎಲ್ಲರಿಗೂ ಆದರ್ಶ

vajapeyee
Published on

ಬೈಲಹೊಂಗಲ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಬಿಜೆಪಿ ಮಂಡಲ ವತಿಯಿಂದ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನ ಆಚರಿಸಲಾಯಿತು. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ವಾಜಪೇಯಿ ಅವರು ದೇಶದ ಜನತೆಗೆ ಅನೇಕ ಯೋಜನೆಗಳ ಕೊಡುಗೆ ನೀಡಿದ್ದಾರೆ. ಅವರ ಆದರ್ಶ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಲಕ್ಕಪ್ಪ ಕಾರಗಿ, ಪ್ರಶಾಂತ ಅಮ್ಮಿನಬಾವಿ, ಗೌಡಪ್ಪ ಹೊಸಮನಿ, ಸಚಿನ್ ಕಡಿ, ಸದಾಶಿವಗೌಡ ಪಾಟೀಲ, ಆನಂದ ಅನಿಗೋಳ, ಮಲ್ಲಿಕಾರ್ಜುನ ಮೆಟಗುಡ್ಡ, ಮಲ್ಲಪ್ಪ ಬೆಳಗಾವಿ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net