ಭಾರತ ಕಂಡ ಸರ್ವ ಶ್ರೇಷ್ಠ ನಾಯಕ ವಾಜಪೇಯಿ

Vajpayee is the greatest leader India has ever seen
ಬಾಗಲಕೋಟೆ ನಗರದ ಶಿವಾನಂದ ಜೀನ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಐದನೆ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಸಂಸದ ಪಿ.ಗದ್ದಿಗೌಡರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ವಿ.ಪ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಉಪಾಧ್ಯಕ್ಷ ರಾಜು ರೇವಣಕರ, ರಾಜು ನಾಯ್ಕರ, ಸದಾನಂದ ನಾರಾ, ಬಸವರಾಜು ಹುನಗುಂದ, ಉಮೇಶ ಹಂಚಿನಾಳ ಇದ್ದರು.
Published on



ಬಾಗಲಕೋಟೆ: ಭಾರತ ಕಂಡ ಅತ್ಯಂತ ಸರ್ವ ಶ್ರೇಷ್ಠ ನಾಯಕ ಅಟಲ್ ಬಿಹಾರಿ ವಾಜಪೇಯಿ. ತಮ್ಮ ರಾಜಕೀಯ ಬದುಕಿನಲ್ಲಿ ಸರ್ವರಿಗೂ ಒಳಿತನ್ನು ಬಯಸಿದ್ದರು ಎಂದು ಸಂಸದ ಪಿ.ಗದ್ದಿಗೌಡರ ಹೇಳಿದರು.

ನಗರದ ಶಿವಾನಂದ ಜೀನ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಐದನೆ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅಟಲ್ ಜಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.

ದೇಶ ಕಂಡ ಅಪ್ರತಿಮ ದೇಶಭಕ್ತ ಅಜಾತ ಶತ್ರುವಾಗಿದ್ದ ವಾಜಪಾಯಿ, ದೇಶಕ್ಕಾಗಿ ತಮ್ಮ ಜೀವನವನ್ನೆ ಮುಡಪಾಗಿಟ್ಟವರು,ಅವರು ಶ್ರೇಷ್ಠ ಸಂಸದೀಯ ಪಟು, ಕವಿ, ಜನನಾಯಕರಾಗಿದ್ದರು ಎಂದರು.

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಅಟಲಜಿ ಮೂಲಭೂತ ಸೌಲಭ್ಯಗಳೊಂದಿಗೆ ದೇಶದ ಅಖಂಡತೆಗೆ ಅಭಿವೃದ್ಧಿಯ ಅಡಿಪಾಯ ಹಾಕಿದವರು.ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಮೊದಲ ಪ್ರಧಾನಿಯಾಗಿ ತಮ್ಮ ಪ್ರಾಮಾಣಿಕ ಸೇವೆಯಿಂದ ಜನಪ್ರಿಯರಾದವರು. ಅವರು ಪಕ್ಷವನ್ನು ತಳಹದಿಯಿಂದ ಜನಪ್ರಿಯಗೊಳಸಿ ಆರು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿಗೆ ಪಾತ್ರರಾಗಿದ್ದರು ಎಂದರು.

ವಿ.ಪ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಉಪಾಧ್ಯಕ್ಷ ರಾಜು ರೇವಣಕರ, ರಾಜು ನಾಯ್ಕರ, ಸದಾನಂದ ನಾರಾ, ಬಸವರಾಜು ಹುನಗುಂದ, ಉಮೇಶ ಹಂಚಿನಾಳ, ಯಲ್ಲಪ್ಪ ನಾರಾಯಣಿ, ಪ್ರಜ್ವಲ್ ಸಣ್ಣಕ್ಕಿ, ಸುರೇಶ ಗಬ್ಬೂರ, ರಾಜು ಕೋಟೆಕಲ್,ಮಾನೇಶ ಅಂಬಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net