ವಾಜಪೇಯಿ ದೇಶ ಕಂಡ ಮಹಾನ್​ ನಾಯಕ

27 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದೇಶ ಕಂಡ ಮಹಾನ್​ ನಾಯಕರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಸಹ ಒಬ್ಬರು. ದೇಶದ ಅಭಿವೃದ್ಧಿಗೆ ಅವರು ತಮ್ಮದೇಯಾದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ಜೀವನ, ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸಬೇಕು. ಅವರ ಜನ್ಮದಿನ ಪ್ರಯುಕ್ತ ಚೆಸ್​ ಸ್ಪರ್ಧೆ ಆಯೋಜಿಸಿರುವುದು ಅತ್ಯಂತ ಶ್ಲಾನೀಯ ಎಂದು ಹೆಬ್ಬಳ್ಳಿ ಗ್ರಾಪಂ ಉಪಾಧ್ಯಕ್ಷೆ ಸುಶೀಲವ್ವ ಸಾಲಿ ಹೇಳಿದರು.

ಭಾರತ ರತ್ನ, ಮಾಜಿ ಪ್ರಧಾನಮಂತ್ರಿ ಅಟಲ್​ ಬಿಹಾರಿ ವಾಜಪೇಯಿ 100ನೇ ಜನ್ಮದಿನದ ಪ್ರಯುಕ್ತ ಗ್ರಾಪಂ ಸದಸ್ಯ ಬಸವರಾಜ ಹೆಬ್ಬಾಳ ಗೆಳೆಯರ ಬಳಗದ ವತಿಯಿಂದ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಚೆಸ್​ ಸ್ಪರ್ಧೆ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಾಜಿ ಅಧ್ಯಕ್ಷ ನಿಂಗಪ್ಪ ಮೊರಬದ, ಗ್ರಾಪಂ ಸದಸ್ಯ ಬಸವರಾಜ ಹೆಬ್ಬಾಳ, ಸಿದ್ದಪ್ಪ ಕುಂಬಾರ, ಸುರೇಶ ಬನ್ನಿಗಿಡದ, ವಿಠ್ಠಲ ಇಂಗಳೆ, ಬಸವರಾಜ ಹಡಪದ ಹಾಗೂ ಗ್ರಾಮದ ಹಿರಿಯರಾದ ಲಿಂಬಣ್ಣ ನಾಯ್ಕರ, ಬಸವರಾಜ ತಂಬಾಕದ, ಬಾಳು ಕುಡೆಕಾರ, ಮಲ್ಲಪ್ಪ ಸತ್ಯಪ್ಪನವರ, ಬಸಣ್ಣ ಕೂಂಡಿಕೊಪ್ಪ, ಚಂದ್ರು ಮಟ್ಟಿ, ಮುತ್ತಣ್ಣ ಧಾರವಾಡ, ಕಲ್ಲಪ್ಪ ಅಂಬಿಗೇರ, ಮಲ್ಲಪ್ಪ ಹೂಗಾರ, ಯಲ್ಲಪ್ಪ ಪ್ಯಾಟಿ, ಇತರರು ಇದ್ದರು.

ಸ್ಪರ್ಧೆ ವಿಜೇತರು: ಪ್ರಾಥಮಿಕ ಶಾಲಾ ವಿಭಾಗದಲ್ಲಿ ರುತ್ವಿಕ ಧಾರವಾಡ ಪ್ರಥಮ, ಶಂಕತ ನರ್ತಿ ದ್ವಿತೀಯ, ಸಿದ್ದು ನಾದಿಗಟ್ಟಿ ತೃತೀಯ. ಹೆಸ್ಕೂಲ್​ ಶಾಲಾ ವಿಭಾಗದಲ್ಲಿ ವಿಷ್ಣು ಭೂತರೆಡ್ಡಿ (ಪ್ರ), ಸಮರ್ಥ ಬಿಳೇಬಾಳ (ದ್ವಿ), ಗಣೇಶ ಮಾಳಾಪುರ (ತೃ), ವಯಸ್ಕರ ವಿಭಾಗದಲ್ಲಿ ನಿಂಗರಾಜ ಕೊರಡೂರ (ಪ್ರ), ಬಿ.ಎಸ್​. ಟೆಂಗಿನಕಾಯಿ (ದ್ವಿ), ಸುಭಾಷ ಬಡಿಗೇರ (ತೃ) ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net