ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಈಶ್ವರನಗರದ ಶ್ರೀವೈಷ್ಣೋದೇವಿ ದೇವಸ್ಥಾನದಲ್ಲಿ ಜುಲೈ 5ರಂದು ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ನಡೆಯಲಿದೆ.
ಭಾರತೀಯ ಯೋಗಾಸನ ಕೇಂದ್ರ ಸಮಿತಿ ಆಶ್ರಯದಲ್ಲಿ ಹಾಗೂ ಶ್ರೀದೇವಪ್ಪ ಅಜ್ಜನವರ ಸಾನ್ನಿಧ್ಯದಲ್ಲಿ ವೈಷ್ಣೋದೇವಿ ದರ್ಶನ, ಪೂಜೆ ಅಭಿಷೇಕ ಮಂಗಳ ಕಾರ್ಯಗಳು ನಡೆಯಲಿವೆ.
ಬೆಳಗ್ಗೆ 8ರಿಂದ ರಾತ್ರಿ 8ರ ತನಕ ದೇವಿ ದರ್ಶನ ಇರಲಿದೆ. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.