ವೈಷ್ಣೋದೇವಿಯ ಕಾಯಿನ್ ನೆಪದಲ್ಲಿ 27,700ರೂ. ವಂಚನೆ

Fruad
Published on


ಮಂಗಳೂರು: ವೈಷ್ಣೋದೇವಿಯ ಕಾಯಿನ್ ನೆಪದಲ್ಲಿ ದೂರುದಾರರಿಗೆ 27,700ರೂ. ವಂಚನೆ ಮಾಡಿದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೋಹಿತ್ ಅಗರ್‌ವಾಲ್ ಮತ್ತು ಮನೋಜ್ ಕುಮಾರ್ ಪ್ರಕರಣದ ಆರೋಪಿಗಳು.


ಪ್ರಕರಣ ವಿವರ: ಆ.29ರಂದು 11ಗಂಟೆಗೆ ೇಸ್‌ಬುಕ್‌ನಲ್ಲಿ ವೈಷ್ಣೋದೇವಿ ಮಂದಿರದ ಕಾಯಿನ್ ಇದ್ದಲ್ಲಿ ಅದಕ್ಕೆ ಉತ್ತಮ ಬೆಲೆಯನ್ನು ನೀಡುವುದಾಗಿ ಜಾಹೀರಾತು ಬಂದಿತ್ತು. ಇದನ್ನು ನೋಡಿದ ದೂರುದಾರರಲ್ಲಿ ವೈಷ್ನೋದೇವಿಯ ಕಾಯಿನ್ ಇದ್ದ ಕಾರಣ ನಮೂದಿಸಿರುವ ಮೊಬೈಲ್ ನಂಬರ್ ಸಂಪರ್ಕಿಸಿದಾಗ ಆ ಕಾಯಿನ್‌ಗಳಿಗೆ 24,56,000ರೂ. ನೀಡುವುದಾಗಿ ನಂಬಿಸಿದ್ದಾರೆ. ಈ ಹಣ ವರ್ಗಾವಣೆ ನೆಪದಲ್ಲಿ ಹಂತಹಂತವಾಗಿ ಪಿರ್ಯಾದಿದಾರರಿಂದ 27,700ರೂ. ವಂಚನೆಗೈದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net