

ಮಡಿಕೇರಿ:
ಕರ್ನಾಟಕ ವಿಕಾಸರಂಗ ಸಂಘಟನೆ ಕೊಡಗು ಜಿಲ್ಲಾಧ್ಯಕ್ಷರಾಗಿ ಪಿ.ಎಸ್. ವೈಲೇಶ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಿಕಾಸರಂಗ ಸಂಘಟನೆ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ, ನೆಲ-ಜಲದ ರಕ್ಷಣೆಗಾಗಿ ಶ್ರಮಿಸುವ ಧ್ಯೇಯೋದ್ಧೇಶಗಳೊಂದಿಗೆ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕವಿಯೂ ಆಗಿರುವ ವಿರಾಜಪೇಟೆ ತಾಲೂಕು ಕೆ.ಬೋಯಿಕೇರಿ ನಿವಾಸಿ ಪಿ.ಎಸ್. ವೈಲೇಶ ಜಿಲ್ಲೆಯಲ್ಲಿ ಈ ಸಂಘಟನೆಯನ್ನು ಮುನ್ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.