

ಬಳ್ಳಾರಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಶ್ರೀ ಪಾಂಡುರಂಗ ವಿಠಲ ದೇವಸ್ಥಾನ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ತುಳಸಿ ಅರ್ಚನೆ, ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ರಮಾಧಾನ ಭಜನಾ ಮಂಡಳಿ, ಪರಿಮಳ ನಾಟ್ಯಾರ್ಚನ ಭಜನಾ ಮಂಡಳಿ, ಗಜಾನನ ಭಜನಾ ಮಂಡಳಿ, ಸಪ್ತಗಿರಿ ಭಜನಾ ಮಂಡಳಿ ಸೇರಿ ವಿವಿಧ ಮಂಡಳಿಗಳಿಂದ ಭಜನೆ ನಡೆಯಿತು. ಭಕ್ತಾಧಿಗಳು ಬೆಳಗ್ಗೆ 5 ಗಂಟೆಯಿಂದ ದೇವರ ದರ್ಶನ ಪಡೆದರು.