ಹುಬ್ಬಳ್ಳಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮ, ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ, ಭಕ್ತರಿಂದ ದರ್ಶನ

IMG-20250111-WA0001-1.jpg
Published on

ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಸಂಭ್ರಮ ಎಲ್ಲೆಡೆ ಕಂಡು ಬಂತು. ಹಲವು ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಇಲ್ಲಿಯ ಅರವಿಂದ ನಗರದ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ, ಹುಬ್ಬಳ್ಳಿ ಧಾರವಾಡ ಇಸ್ಕಾನ್ ದೇವಸ್ಥಾನ, ಉಣಕಲ್ಲ ನೃಪತುಂಗ ಬೆಟ್ಟ ಬಳಿಯ ಕಾಶಿ ಮಠದ ದೇವಸ್ಥಾನ ಸೇರಿ ಹಲವು ಕಡೆಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ಭಕ್ತರು ಸರದಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಪ್ರಸಾದ ಸ್ವೀಕರಿಸಿದರು.

ರಾಯಾಪುರದ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಗಾಗಿ ಹಲವು ಸಿದ್ಧತೆಗಳನ್ನು ಮಾಡಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಶುಕ್ರವಾರ ಬೆಳಗ್ಗೆಯಿಂದ ವಿಶೇಷ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸ್ವರ್ಣ ರಂಗು ಲೇಪಿತ ಭವ್ಯವಾದ ವೈಕುಂಠ ದ್ವಾರವನ್ನು ದೇವಸ್ಥಾನದ ಪ್ರವೇಶದಲ್ಲಿ ಸ್ಥಾಪಿಸಲಾಗಿತ್ತು.

ದೇವಸ್ಥಾನದ ಒಳಗೆ ಭಕ್ತರಿಗೆ ಲಕ್ಷಾರ್ಚನೆ ಸೇವೆಗೆ ಅವಕಾಶ ನೀಡಲಾಯಿತು. ಸಂಜೆ ವೆಂಕಟೇಶ್ವರ ಹೋಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net