

ಕುಶಾಲನಗರ:
ವೈಕುಂಠ ಏಕಾದಶಿಯ ಪೂಜಾ ಕಾರ್ಯಗಳಲ್ಲಿ ಭಾಗವಹಿಸಲು ಶುಕ್ರವಾರ ಬೆಳಗ್ಗೆ ಕೊರೆಯುವ ಚಳಿಯಲ್ಲಿ ಭಕ್ತಿ ಶ್ರದ್ಧೆಯಿಂದ ಕೂಡಿದ ನೂರಾರು ಭಕ್ತರು ಸ್ಥಳೀಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದರು. ಬೆಳಗಿನ 6ಯಿಂದಲೇ ಮಹಾವಿಷ್ಣುವಿಗೆ ವೇದ ಪಂಡಿತರ ವೇದ ಮಂತ್ರಗಳ ಮೂಲಕ ಪೂಜಾ ಕಾರ್ಯಗಳು ಪ್ರಾರಂಭವಾದವು.
ಮಹಾವಿಷ್ಣುವಿಗೆ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಸ್ವಾಮಿಗೆ ವಿಶೇಷ ಅಲಂಕಾರ, ಮಂಗಳವಾದ್ಯಗಳ ಮೂಲಕ ಸಮರ್ಪಣೆ ಮಾಡಲಾಯಿತು.
ಒಂಬತ್ತು ಗಂಟೆಗೆ ಸರಿಯಾಗಿ ಪೂಜಾ ವಿಧಿ ವಿಧಾನಗಳು ನಡೆದು, ವೈಕುಂಠ ದ್ವಾರ ಪೂಜೆಯ ಮೂಲಕ ಭಕ್ತಾದಿಗಳ ದರ್ಶನಕ್ಕೆ ದ್ವಾರ ತೆರೆಯಲಾಯಿತು. ನೂರಾರು ಭಕ್ತರು ಈ ಸಂದರ್ಭ ಮಹಾವಿಷ್ಣುವಿನ ವೈಕುಂಠ ದ್ವಾರವನ್ನು ಪ್ರವೇಶಿಸುವ ಮೂಲಕ ಧನ್ಯತೆಯ ಭಾವನೆಯನ್ನು ಹೊಂದಿದರು.
ನAತರ ಭಕ್ತರಿಗೆ ಪ್ರಸಾದ, ಪಂಚಾಮೃತ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಾಸವಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಇಡೀ ದಿನ ವೈಕುಂಠ ದ್ವಾರದ ಪ್ರವೇಶ ಮಾಡಲು ಎಲ್ಲಾ ಭಕ್ತರಿಗೂ ದರ್ಶನಕ್ಕೆ ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.