ವಾಹನ ಡಿಕ್ಕಿಯಾಗಿ ಸವಾರ ಸಾವು

accident-15
Published on

ಚಿಕ್ಕೋಡಿ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಮೃತಪಟ್ಟಿರುವ ಟನೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್​ ಬಳಿ ಸಂಕೇಶ್ವರ& ಗೋಕಾಕ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ.

ಬೆಲ್ಲದ ಬಾಗೇವಾಡಿ ಗ್ರಾಮದ ಸುನೀಲ ಮಾರುತಿ ರಾಜವ್ವಗೋಳ (54) ಮೃತ. ಈತ ಹುಕ್ಕೇರಿಯಿಂದ ಸಂಕೇಶ್ವರ ಕಡೆಗೆ ಬೈಕ್​ ಮೇಲೆ ಹೊರಟಿರುವಾಗ ವಾಹನ ಡಿಕ್ಕಿಯಾಗಿ ಮೃತನಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಂಕೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net