ವಾಗೀಶ ತೀರ್ಥರ ಮಧ್ಯಾರಾಧನೆ ಸಂಪನ್ನ

16 gvt 04
ಗಂಗಾವತಿ ತಾಲೂಕಿನ ಆನೆಗೊಂದಿ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಶ್ರೀ ವಾಗೀಶ ತೀರ್ಥರ ಮಧ್ಯಾರಾಧನೆ ನಿಮಿತ್ತ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರ ವಿಶೇಷ ಪೂಜೆ ಬುಧವಾರ ನೆರವೇರಿಸಿದರು.
Published on

ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಶ್ರೀ ವಾಗೀಶ ತೀರ್ಥರ ಮಧ್ಯಾರಾಧನೆ ಬುಧವಾರ ಸಂಪನ್ನವಾಯಿತು.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆ ಮಧ್ಯಾರಾಧನೆಯನ್ನು ಮಂತ್ರಾಲಯ ಮಠದಿಂದ ಮಧ್ಯಾಹ್ನದವರಿಗೂ ಮಾತ್ರ ನಿರ್ವಹಿಸಲು ಅವಕಾಶವಿದ್ದರಿಂದ ಬೆಳಗ್ಗೆ ಎಲ್ಲ ಪೂಜಾ ಕೈಕಂರ್ಯಗಳು ನೆರವೇರಿದವು.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದಂಡೋದಕ ಸ್ನಾನ, ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ವಿಶೇಷ ಲ ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ರಜತ, ರೇಷ್ಮೆ ಮತ್ತು ಹೂವಿನ ವಿಶೇಷ ಅಲಂಕಾರ, ಸಂಸ್ಥಾನ ಪೂಜೆ, ಭಜನೆ, ಹಸ್ತೋದಕ, ಅಲಂಕಾರ ಸಂತರ್ಪಣೆ ಮತ್ತು ತೀರ್ಥ ಪ್ರಸಾದ ವಿತರಣೆ ಜರುಗಿತು.

ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಅಧ್ಯಾಪಕರಾದ ವೇಣುಗೋಪಾಲಾಚಾರ್, ಪವನಾಚಾರ್ ಕುರ್ಡಿಯರಿಂದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ವಿದ್ಯಾಪೀಠದ ಗುಂಡಾಚಾರ್ಯ ನೇತೃತ್ವದ ವಿದ್ಯಾರ್ಥಿಗಳು ವಿಶೇಷ ಸೇವೆ ಸಲ್ಲಿಸಿದರು.

ಪಂಡಿತರಾದ ದ್ವಾರಕಾನಾಥಾಚಾರ್, ಅನಂತಾಚಾರ್ ಪುರಾಣಿಕ್, ಜಯತೀರ್ಥಾಚಾರ್, ಗೋಪಿ ಶ್ಯಾಮಾಚಾರ್, ಪ್ರದ್ಯುಮ್ನಾಚಾರ್, ವರುಣಾಚಾರ್, ಸಂಜೀವ ಕುಲ್ಕರ್ಣಿ ಇಡಪನೂರ್, ಆನೆಗೊಂದಿ ಶ್ರೀಪಾದರಾಜರ ಮಠದ ವ್ಯವಸ್ಥಾಪಕ ವಿಜಯದೇಸಾಯಿ ಗ್ವಾತಗಿ, ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ್, ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತಕುಲ್ಕರ್ಣಿ ಇಡಪನೂರ್, ಆರ್ಚಕರಾದ ವಿಜೇಂದ್ರ ಚಳ್ಳಾರಿ, ನರಸಿಂಹಾಚಾರ, ಶ್ರೀನಿವಾಸಾಚಾರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net