

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸರಸ್ವತಿ ಸಂಗೀತ ವಿದ್ಯಾಲಯವು ಉದ್ಯಮಿ ವಿಕ್ರಮ ಶಿರೂರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ. 21ರಂದು ಸಂಜೆ 5.30ಕ್ಕೆ ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಭವನದಲ್ಲಿ ವಾದ್ಯ ನಿನಾದ ಕಾರ್ಯಕ್ರಮ ಆಯೋಜಿಸಿದೆ.
ಸಮಾರಂಭದಲ್ಲಿ ಪುಣೆಯ ಸಾನಿಯಾ ಪಾಠಣಕರ ಹಿಂದುಸ್ತಾನಿ ಸಂಗೀತ, ಬೆಂಗಳೂರಿನ ಸುಮಾ ಹೆಗಡೆ ಸಂತೂರ ವಾದನ ಪ್ರಸ್ತುತಪಡಿಸಲಿದ್ದಾರೆ. ಶ್ರೀಧರ ಮಾಂಡ್ರೆ ಮತ್ತು ಬಸವರಾಜ ಹಿರೇಮಠ, ರಾಯಿ ಗಲಗಲಿ ವಾದ್ಯ ಸಹಕಾರ ನೀಡಲಿದ್ದಾರೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಂಸ್ಥೆ ಅಧ್ಯಕ್ಷ ಉದಯ ದೇಸಾಯಿ ತಿಳಿಸಿದ್ದಾರೆ.