ವಡ್ಲೂರಿ ಹುಲಿ ಪತ್ತೆ ವಿಡಿಯೋ ವೈರಲ್: ಅರಣ್ಯ ಅಽಕಾರಿಗಳು ಭೇಟಿ

Vadluri,Tiger, Spotting Video Viral,
Vadluri,Tiger, Spotting Video Viral,
Published on

ರಾಯಚೂರು ತಾಲೂಕಿನ ವಡ್ಲೂರಿನಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಗ್ರಾಮಕ್ಕೆ ಭಾನುವಾರ ರಾತ್ರಿ ಅರಣ್ಯ ಇಲಾಖೆಯ ಅಽಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಡ್ಲೂರು ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಎಲ್ಲಡೆ ಹಬ್ಬಿದೆ. ಟ್ರ‍್ಯಾಪ್ ಕ್ಯಾಮರಾದಲ್ಲಿ ಸೆರೆಹಿಡಿದಿರುವ ಹುಲಿಯ ಚಿತ್ರದ ಜತೆಗೆ ರಸ್ತೆಯ ಪಕ್ಕದಲ್ಲಿ ಹುಲಿಯ ಹೆಜ್ಜೆಯನ್ನು ತೋರಿಸುವ ವಿಡಿಯೋ ಹಾಗೂ ವಡ್ಲೂರು ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬರು ಮೈಕ್ ಮೂಲಕ ಗ್ರಾಮದಲ್ಲಿ

ಹುಲಿ ಬಂದಿದೆ ಎಚ್ಚರದಿಂದಿರಿ,

ಗ್ರಾಮಕ್ಕೆ ಪೊಲೀಸರು ಬಂದಿದ್ದಾರೆ ಎಂದು ಎಚ್ಚರಿಕೆ ನೀಡುತ್ತಿರುವ ವಿಡಿಯೋ ಸಹ ಹರಿಬಿಡ¯ ಈ ಎಲ್ಲ -ÉÇÃಟೊ ಮತ್ತು ವಿಡಿಓಗಳಿಂದ ಭಾನುವಾರ ರಾತ್ರಿ ಇಡೀ ಗ್ರಾಮದಲ್ಲಿ ಭಯದ ವಾತವರಣ ಸೃಷ್ಠಿಯಾಗಿತ್ತು. ವಿಷಯ ತಿಳಿದ ಅರಣ್ಯ ಇಲಾಖೆಯ ಅಽಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಗ್ರಾಮದಲ್ಲಿ ಹುಲಿಯ ಕುರುಹುಗಳಾಗಲಿ ಅಥವಾ ಹೆಜ್ಜೆ ಗುರುತುಗಳಾಗಲಿ ಅಽಕಾರಿಗಳಿಗೆ ಕಂಡುಬAದಿಲ್ಲ. ಹಲವರು ಈ ಘಟನೆಯನ್ನು ಗಾಳಿ ಸುದ್ದಿ ಹಬ್ಬಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net