ಎಲ್ಲಾ ರೀತಿಯ ವಿಕಲಚೇತನ ಮಕ್ಕಳು ಹಾಗೂ ವೃದ್ಧಾಶ್ರಮಕ್ಕೆ ಅರ್ಜಿ ಆಹ್ವಾನ

vadiraj
Published on

ಬೆಂಗಳೂರಿನ ‘ಶ್ರೀ ವಾದಿರಾಜ ಟ್ರಸ್ಟ್‌’ ಕೋಟೆ ಕೋಲಾರದಲ್ಲಿ ನಡೆಸುತ್ತಿರುವ ಹಿರಿಯ ನಾಗರಿಕರ ‘ತಪೋವನ ವೃದ್ಧಾಶ್ರಮ’, ಎಲ್ಲಾ ರೀತಿಯ ವಿಕಲಚೇತನರಿಗಾಗಿ ಇರುವ ‘ಶಾರದಾ ನವಜೀವನ ಕುಟೀರ’ ಹಾಗೂ ‘ಶಾರದಾ ನವಜೀವನ ವಿದ್ಯಾಮಂದಿರ ವಿಶೇಷ ವಸತಿ ಶಾಲೆ’ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ವೃತ್ತಿ ತರಬೇತಿ ಕೇಂದ್ರ ಮತ್ತು ಪುನರ್ವಸತಿ ಕೇಂದ್ರದಲ್ಲಿ ಸಕಲ ಆಧುನಿಕ ಸೌಕರ್ಯ, ವೈದ್ಯಕೀಯ ಸೌಲಭ್ಯ, ಸುಸಜ್ಜಿತ ಕೊಠಡಿಯ ಜತೆಗೆ ವಿಶೇಷ ವಸತಿ ಸೌಕರ್ಯಗಳನ್ನೂ ಕಲ್ಪಿಸಲಾಗುತ್ತಿದೆ.

ಕಳೆದ 30 ವರ್ಷಗಳಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ನಡೆಯುತ್ತಿರುವ ಉಚಿತ ವಸತಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನೂ ಹೇಳಿಕೊಡಲಾಗುತ್ತಿದೆ. ಇದಾಗಲೇ ಈ ಶಾಲೆಯ ಮಕ್ಕಳು ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಸುಖ, ಶಾಂತಿ, ನೆಮ್ಮದಿ ಅರಸುವವರಿಗೆ ಇಲ್ಲಿಯ ವೃದ್ಧಾಶ್ರಮದಲ್ಲಿ ಸಕಲ ಸೌಲಭ್ಯಗಳೂ ಇವೆ. ವೃದ್ಧಾಶ್ರಮ, ಅಂಗವಿಕಲರು ಮತ್ತು ಬುದ್ಧಿಮಾಂದ್ಯ ಮಕ್ಕಳನ್ನು ಸೇರಿಸಲು ಬಯಸುವವರು ಸಂಪರ್ಕಿಸಬಹುದು: 94480 44593/ 79756 68843

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net