ಡಾ.ಕೆ.ಅನಂತರಾಮು ಅವರಿಂದ ‘ವಡ್ಡಾರಾಧನೆ’ ಉಪನ್ಯಾಸ

3
Published on

ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಪೂಜಾ ರಜತ ಮಹೋತ್ಸವ ಆಚರಣೆ ಅಂಗವಾಗಿ ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ವರ್ಷ ಕಾಲ ಸರಣಿ ಉಪನ್ಯಾಸ ಕಾರ್ಯಕ್ರಮದ ಪ್ರಮುಕ್ತ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರು ‘ವಡ್ಡಾರಾಧನೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಉಪನ್ಯಾಸದ ಬಳಿಕ ಕೊಲ್ಕತ್ತದ ಸಯಾನ್ ಘೋಷ್ ಸಿತಾರ್ ವಾದನ ಕಾರ್ಯಕ್ರಮ ನಡೆಸಿಕೊಟ್ಟರು. ಇವರಿಗೆ ಭೀಮಶಂಕರ್(ತಬಲಾ) ಸಾಥ್ ನೀಡಿದರು.

ನಿಲಯದ ಅಧ್ಯಕ್ಷ ಲಕ್ಷ್ಮೀರಮಣ, ಕಾರ್ಯದರ್ಶಿ ಶಾಮಾನಂದ ಸಾಗರ್, ಸದಸ್ಯರಾದ ನಮಿತೇಜ, ಪಾರ್ಶ್ವನಾಥ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಪಿ.ನಾಭಿರಾಜ್, ಪ್ರಾಯೋಜಕರಾದ ಸಂಜಯ್ ಜೈನ್, ಅನುರಾಧ ಶ್ರೀಪಾಲ್ ಇತರರಿದ್ದರು. 2026 ಮಾರ್ಚ್‌ವರೆಗೆ ಪ್ರತಿ ತಿಂಗಳ ಎರಡನೇ ಭಾನುವಾರ ಸಂಜೆ 4 ರಿಂದ 5.30ರವರೆಗೆ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net