ಕೋಡಿ ಬಿದ್ದ ವಡ್ಡಗೆರೆ ಕೆರೆ

31-GPT-2-.-
Published on

ಗುಂಡ್ಲುಪೇಟೆ: ತಾಲೂಕಿನ ವಡ್ಡಗೆರೆ ಕೆರೆ ತುಂಬಿ ಮಂಗಳವಾರ ಕೋಡಿ ಬಿದ್ದಿರುವುದು ಈ ಭಾಗದ ರೈತರಲ್ಲಿ ಹರ್ಷ ತಂದಿದೆ.
ಡಿ.14ರಂದು ಹುತ್ತೂರಿನ ದೊಡ್ಡಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ವಡ್ಡಗೆರೆ ಹಾಗೂ ಸಮೀಪದ ಕರಕಲ ಮಾದಹಳ್ಳಿ ಕೆರೆಗೂ ನೀರು ಹರಿಸಲಾಗುತ್ತಿದ್ದು ಯೋಜನೆಗೆ ಚಾಲನೆ ನೀಡಿದ ಕೇವಲ 15 ದಿನಗಳಲ್ಲಿ ವಡ್ಡಗೆರೆ ಕೆರೆ ಕೋಡಿ ಬಿದ್ದಿದೆ.

ಕೋಡಿ ನೀರು ಸಮೀಪದ ಮಂಚನಕೆರೆಗೆ ಹರಿಯುತ್ತಿದ್ದು ನಂತರ ಕರಕಲಮಾದಹಳ್ಳಿ ಕೆರೆಗೆ ಹರಿಯಲಿದೆ. ಇಲ್ಲಿಂದ ದಾರಿಬೇಗೂರು ಹಾಗೂ ಯರಿಯೂರು ಕೆರೆಗಳಿಗೆ ಹರಿಯಲಿದೆ. ಇದನ್ನು ನೋಡಲು ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net