ವಡರಹಟ್ಟಿ ಗ್ರಾಮದಲ್ಲಿ ಸರ್ಕಾರಿ ಆಸ್ತಿ ಪರಭಾರೆ

0101
Published on

ಬೆಳಗಾವಿ: ಮೂಡಲಗಿ ತಾಲೂಕಿನ ವಡರಹಟ್ಟಿ ಗ್ರಾಮದ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗ್ರಾಮದಲ್ಲಿ 74.32 ಎಕರೆ ಸರ್ಕಾರಿ ಖಾಲಿ ಜಾಗವಿದೆ.

ಈ ಪ್ರದೇಶದಲ್ಲಿ ಪುರಾತನ ಕಾಲದಿಂದ ಕರೆ ಇತ್ತು. ಆದರೆ, ಗ್ರಾಪಂಗಳ ಆಸ್ತಿ ಪುಸ್ತಕದಲ್ಲಿ ಕೆರೆ ಹೆಸರನ್ನು ತೆಗೆದು ಹಾಕಲಾಗಿದೆ. ಜತೆಗೆ, ಕೆರೆ ಹೆಸರಿನಲ್ಲಿದ್ದ ದಾಖಲೆ ಮಾಯವಾಗಿವೆ. ಕೆರೆ ಅಭಿವೃದ್ಧಿಗೆ ಅಧಿಕಾರಿಗಳಿಗೆ ವಿನಂತಿ ಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಆಸ್ತಿ ಪರಭಾರೆ ಕುರಿತು ಅಗತ್ಯ ತನಿಖೆಯಾಗಬೇಕು.

ಈ ಕುರಿತು ತಾಲೂಕು ಆಡಳಿತ ಕ್ರಮ ವಹಿಸದಿದ್ದರೆ ಅ.2ರಿಂದ ವಡರಹಟ್ಟಿ ಗ್ರಾಪಂ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುರೇಶ ಕುದರಿ, ಪಾಂಡುರಂಗ ಭೀರನಗಡ್ಡಿ, ಲಕ್ಷ್ಮಣ ಬಾಲಣ್ಣವರ, ಶಿವಾನಂದ ಕಟ್ಟಿಕಾರ, ಗುಂಡೂರಾವ, ಗಣಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net