ನಾಯ್ಕಲ್ನಲ್ಲಿ ಸರಳ ರಂಜಾನ್ ಆಚರಣೆ

25 NKL 1
Published on

ನಾಯ್ಕಲ್: ರಂಜಾನ್ ನಿಮಿತ್ತ ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಸಿದ್ಧರಾಯ ಬಳ್ಳೂರ್ಗಿ ನೇತೃತ್ವದಲ್ಲಿ ಸೋಮವಾರ ಗ್ರಾಮದಲ್ಲಿ ಸೂಕ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.

ಗ್ರಾಮದಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ತಮ್ಮ ಮನೆಯಲ್ಲಿಯೇ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದರು. ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ದೂರದಿಂದ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಜಿಲ್ಲಾಡಳಿತ ಸೂಚನೆ ಮೇರೆಗೆ ಹಬ್ಬವನ್ನು ಬಹಳ ಸರಳವಾಗಿ ಆಚರಿಸಲಾಗಿದೆ. ಆರೋಗ್ಯ ಸುರಕ್ಷತೆ ಅತಿ ಮುಖ್ಯ ಕರೊನಾ ವೈರಸ್ ತಡೆಗಟ್ಟವುದಕ್ಕೆ ಎಲ್ಲರ ಸಹಕಾರಕ್ಕೆ ಕೈ ಜೋಡಿಸಿದ್ದೇವೆ. ಸತತ ಒಂದು ತಿಂಗಳ ಕಾಲ ರಂಜಾನ್ ಮಾಸ ಉಪವಾಸ ವೃತ(ರೋಜ್) ಮಾಡಿ, ಮನೆಗಳಲ್ಲಿಯೇ ಬೆಳಗ್ಗೆಯೇ ನಮಾಜ್ ಮಾಡಿ ಬಹಳ ಸರಳವಾಗಿ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಾಯಿತು ಎಂದು ಮುಸ್ಲಿಂ ಸಮಾಜದ ಮುಖಂಡರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net