ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್‌ಗೆ ವಚನ್ ಆಯ್ಕೆ

28spt1- vachan
Published on
  • ಮಡಿಕೇರಿ: ಕೊಡಗು ಜಿಲ್ಲೆಯ ಹಾಕಿಪಟು ಎಚ್.ಎ.ವಚನ್ ಅವರು ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್‌ಗೆ ಆಯ್ಕೆಯಾಗುವ ಮೂಲಕ ಭವಿಷ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶದ ನಿರೀಕ್ಷೆ ಮೂಡಿಸಿದ್ದಾರೆ.
  • ಸೋಮವಾರಪೇಟೆ ಕ್ಲಬ್ ರಸ್ತೆ ನಿವಾಸಿ, ಡಾಲ್ಫೀನ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಹಾಕಿ ಆಟಗಾರ ಎಚ್.ಎನ್.ಅಶೋಕ್‌ಗೌಡ, ಎಚ್.ಎ.ಸುಜಿನಿ ದಂಪತಿಯ ಪುತ್ರ ವಚನ್, ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪಸ್ ಕೋರ್ ಗ್ರೂಪ್‌ಗೆ ಆಯ್ಕೆಯಾಗಿರುವ ಪ್ರತಿಭಾನಿತ್ವ ಹಾಕಿಪಟು.
  • ಪಟ್ಟಣದ ಒಎಲ್‌ವಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿದ್ದುಕೊಂಡು ಸೆಂಟ್ ಅಂತೋಣಿ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಡಿವೈಇಎಸ್ ಕ್ರೀಡಾ ಹಾಸ್ಟೆಲ್‌ನಲ್ಲಿದ್ದು ಜೈನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
  • 2019ರಿಂದ 2023ರವರೆಗೆ ಹಾಕಿ ಇಂಡಿಯಾದಿಂದ ಆಯೋಜನೆಗೊಂಡಿದ್ದ ಜೂನಿಯರ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಟವಾಡಿದ್ದಾರೆ. ಇದೀಗ ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್‌ಗೆ ಆಯ್ಕೆಯಾಗುವ ಮೂಲಕ ದಕ್ಷಿಣ ಭಾರತದಿಂದ ಈ ಬಾರಿ ಇಬ್ಬರು ಆಯ್ಕೆಯಾಗಿದ್ದು, ಕರ್ನಾಟಕದಿಂದ ವಚನ್, ತಮಿಳುನಾಡಿನಿಂದ ವೈ.ಇ.ಆನಂದ್ ಆಯ್ಕೆಯಾಗಿರುವ ಇನ್ನೊಬ್ಬ ಆಟಗಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net