ವಚನಾನಂದ ಸ್ವಾಮೀಜಿ ಹೇಳಿಕೆ ವಿವಾದ | ಸಲಹೆ ಕೊಡಬಹುದಷ್ಟೇ, ಮುಖ್ಯಮಂತ್ರಿಗಳ ಪರಮಾಧಿಕಾರವನ್ನು ಪ್ರಶ್ನಿಸುವಂತಿಲ್ಲ: ಸಚಿವ ಜಗದೀಶ ಶೆಟ್ಟರ್

Jagadish Shettar
Published on

ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನ ಎಂದ್ರೆ ಸಾಕಷ್ಟು ಒತ್ತಡ ಇರುತ್ತೆ. ಮುಖ್ಯಮಂತ್ರಿಯಾಗಿದ್ದಾಗ ನಾನೂ ಸಾಕಷ್ಟು ಒತ್ತಡ ಎದುರಿಸಿದ್ದೇನೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಂಕಷ್ಟದಲ್ಲಿದ್ದಾಗ ನಮ್ಮ ಜೊತೆ ಬಂದ 17ಜನರನ್ನ ಮೊದಲು ಕ್ಯಾಬಿನೆಟ್ ಗೆ ಸೇರಿಸಿಕೊಳ್ಳಬೇಕು. ಮೂಲ ಬಿಜೆಪಿಗರಿಗೆ ಮುಂದೆ ಸ್ಥಾನ ಸಿಕ್ಕೇ ಸಿಗುತ್ತೆ. ಹೀಗಾಗಿ ಸಿಎಂಗೆ ಸಹಜವಾಗಿಯೇ ಒತ್ತಡ ಇದೆ ಎಂದು ಹೇಳಿದರು.

ಸಿಎಂ ರಾಜಿನಾಮೆ ಇಂಗಿತ ವ್ಯಕ್ತಪಡಿಸಿದ ವಿಚಾರ, ನಿನ್ನೆ ಘಟನೆಗೆ ಸಂಬಂಧಿಸಿದಂತೆ ಹಾಗೆ ಹೇಳಿರಬಹುದು. ಸಿಎಂ ಯಾವುದೇ ಒತ್ತಡಕ್ಕೆ ಒಳಗಾಗದೇ ಆಡಳಿತ ನಡೆಸಬೇಕು. ನಮ್ಮ ಬೆಂಬಲ ಇದೆ.

ವಚನಾನಂದ ಸ್ವಾಮೀಜಿ ಹೇಳಿಕೆ ಸರಿಯಾದುದಲ್ಲ. ಸಂಪುಟ ರಚನೆ ವಿಚಾರ ಸಂಪೂರ್ಣ ಮುಖ್ಯಮಂತ್ರಿಯ ಪರಮಾಧಿಕಾರ. ಅವರು ಸಲಹೆ ನೀಡಬಹುದಷ್ಟೆ ಹೊರತು ಇಂಥವರನ್ನೇ ಮಂತ್ರಿ ಮಾಡಿ ಅನ್ನೋದು ತಪ್ಪಾಗುತ್ತೆ. ಮುಖ್ಯಮಂತ್ರಿಗಳ ಪರಮಾಧಿಕಾರವನ್ನು ಪ್ರಶ್ನೆ ಮಾಡಬಾರದು. ಸಿಎಂ ಸರಿಯಾದ ನಿರ್ಧಾರವನ್ನೇ ಕೈಗೊಳ್ತಾರೆ ಅನ್ನೊ ಭರವಸೆ ನಮಗಿದೆ ಎಂದು ಶೆಟ್ಟರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net