ವಚನಕಾರರ ಬದುಕು ಆದರ್ಶ- ಡಾ.ರಾಮ್ಮಣ್ಣ

book vitarane
ಮಸ್ಕಿಯ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಚನ ದಿನ ಕಾರ್ಯಕ್ರಮವನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಮಸ್ಕಿ ಪುಸ್ತಕ ವಿತರಿಸಿ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ರಾಮಣ್ಣ, ಉಪನ್ಯಾಸಕರಾದ ಡಾ.ಮಾಹಂತಗೌಡ ಪಾಟೀಲ, ಶಿವಗ್ಯಾನಪ್ಪ ಇದ್ದರು.
Published on

ಮಸ್ಕಿ: ವಚನಕಾರರು ಕಾಯಕ ಮತ್ತು ದಾಸೋಹ ಪರಿಕಲ್ಪನೆಯಲ್ಲಿ ಜೀವನ ನಡೆಸಿ ಆದರ್ಶ ಪ್ರಾಯರಾಗಿದ್ದಾರೆ. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ರಾಮಣ್ಣ ಹೇಳಿದರು.

ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಆಯೋಜಿಸಿದ್ದ ವಚನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಮಸ್ಕಿ ಪುಸ್ತಕ ವಿತರಿಸಿ ಮಾತನಾಡಿದ ಅವರು 850 ವರ್ಷಗಳ ಹಿಂದೆ ವಚನಕಾರರು ಬದುಕಿದಂತೆ ವಚನ ರಚಿಸಿದ್ದಾರೆ. ಅವರ ವಚನಗಳು ಇಂದಿಗೂ ಪ್ರಸ್ತುತ. ಮುಂದಿನ ದಿನಮಾನಕ್ಕೂ ಪ್ರಸ್ತುತವಾಗಿರುತ್ತವೆ ಎಂದರು.

ಹಿರಿಯ ಉಪನ್ಯಾಸಕಕ ಡಾ.ಮಾಹಂತಗೌಡ ಪಾಟೀಲ, ಉಪನ್ಯಾಸಕ ಶಿವಗ್ಯಾನಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ವೀರೇಶ ಸೌದ್ರಿ, ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಮಹಾಂತೇಶ, ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲೂರು, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಮಹೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net