

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯ ಮುರಾರ್ಜಿನಗರದ ಬಸವ ಕೇಂದ್ರದ ವತಿಯಿಂದ ಆ. 4 ರಿಂದ ಸೆ. 1ರವರೆಗೆ ವಚನ ಶ್ರಾವಣವನ್ನು ನಗರದ ಬಡಾವಣೆಗಳ ವಿವಿಧ ಮನೆಗಳಲ್ಲಿ ಮತ್ತು ಹುಬ್ಬಳ್ಳಿಯ ಸುತ್ತ್ತ ಆಯೋಜಿಸಿದೆ.
ಉದ್ಘಾಟನಾ ಸಮಾರಂಭವು ಗೋಕುಲ ರಸ್ತೆಯ ಅಕ್ಷಯ ಪಾರ್ಕ್ನ ಬ್ರೖೆಟ್ ಬಿಸಿನಸ್ ಸ್ಕೂಲ್(ಎಂಬಿಎ) ದಲ್ಲಿ ಆ. 4ರಂದು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ. ಗದಗ-ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಶ್ರೀ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯವನ್ನು ವಹಿಸಿಲಿದ್ದು, ಕೆಎಂಎಫ್. ನಿರ್ದೇಶಕ ನೀಲಕಂಠ ಅಸೂಟಿ ಅತಿಥಿಯಾಗಿ ಪಾಲ್ಗೊಳ್ಳುವರು. ಸಿಎಸ್ಐ ಕಾಲೇಜಿನ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಅವರು ಅನುಭಾವವನ್ನು ಹಂಚಿಕೊಳ್ಳಲಿದ್ದು, ಪ್ರೊ. ಜಿ. ಬಿ. ಹಳ್ಯಾಳ ಅಧ್ಯಕ್ಷತೆ ವಹಿಸುವರು.
ಸೆ. 1ರಂದು ಬೆಳಗ್ಗೆ 11 ಗಂಟೆಗೆ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಇಳಕಲ್ಲನ ವಿಜಯಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರು ಮಹಾಂತ ಸ್ವಾಮೀಜಿ ವಹಿಸುವರು. ಡಾ. ಅವಿನಾಶ ಕವಿ ಅವರು ಅನುಭಾವವನ್ನು ಹಂಚಿಕೊಳ್ಳುವರು. ಶಾಸಕ ಅರವಿಂದ ಬೆಲ್ಲದ ಅತಿಥಿಯಾಗಿದ್ದು, ಪ್ರೊ. ಪ್ರೊ ಜಿ. ಬಿ. ಹಳ್ಯಾಳ ಅಧ್ಯಕ್ಷತೆ ವಹಿಸುವರು.