ಶರಣೆಯರಿಂದ ವಚನ ಸಂಗೀತದ ಭವ್ಯ ಮೆರವಣಿಗೆ

NEW NEW
Published on

ಹುಬ್ಬಳ್ಳಿ : ವಚನ ಸಾಹಿತ್ಯದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಗುರುವಾರ ಮಹಾ ಶರಣ ನುಲಿಯ ಚೆಂದಯನವರ ಜಯಂತ್ಯುತ್ಸವ ಹಾಗೂ ಶರಣೆಯರಿಂದ ವಚನ ಸಂಗೀತದ ಭವ್ಯ ಮೆರವಣಿಗೆ ನೆರವೇರಿತು.

ಮಹಾಶರಣೆ ಗಂಗಾಬಿಕಾ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಕೇಂದ್ರ ವತಿಯಿಂದ ಆಯೋಜಿಸಿದ್ದ ಮೆರವಣಿಗೆಗೆ ಮೂರುಸಾವಿರ ಮಠದಲ್ಲಿ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಕೊಪ್ಪಿಕರ ರಸ್ತೆ, ಮಹಾನಗರ ಪಾಲಿಕೆ, ಚನ್ನಮ್ಮ ವೃತ್ತದ ಮೂಲಕ ಇಂದಿರಾಗಾಂಧಿ ಗಾಜಿನ ಮನೆ ತಲುಪಿತು. ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

18 ಮಹಿಳಾ ಮಂಡಳದ 300 ಕ್ಕೂ ಹೆಚ್ಚು ಮಹಿಳಾ ಸದಸ್ಯೆಯರು ಮೆವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಗದ ಸಂಚಾಲಕಿ ಡಾ. ಸ್ನೇಹಾ ಭೂಸನೂರ, ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ, ಬಸವ ಕೇಂದ್ರದ ಶಶಿಧರ ಕರವೀರಶೆಟ್ಟರ, ದಾಕ್ಷಾಯಿಣಿ ಕೋಳಿವಾಡ, ಜಯಶ್ರೀ ಹಿರೇಮಠ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net