

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಫೆ. 14ರಂದು ಮಧ್ಯಾಹ್ನ 4 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಜಿಲ್ಲೆಯ ಪಿಯುಸಿ ಪ್ರಥಮ ಮತ್ತು ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಸರ್ವಜ್ಞನ ವಚನಗಳ ಕಂಠಪಾಠ ಮತ್ತು ಅರ್ಥವಿವರಣೆ ಸ್ಪರ್ಧೆ ಏರ್ಪಡಿಸಿದೆ.
ಸರ್ವಜ್ಞನ ಒಂದು ವಚನವನ್ನು ಕಂಠಪಾಠದೊಂದಿಗೆ ಹೇಳಿ ವಚನದ ಅರ್ಥವನ್ನು 3 ರಿಂದ 5 ನಿಮಿಷದೊಳಗೆ ಹೇಳಬೇಕು. ಮೊದಲು ಹೆಸರು ನೋಂದಾಯಿಸಿಕೊಳ್ಳುವ 25 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಹೆಸರು, ಕಾಲೇಜು, ವರ್ಗ, ಮೊಬೈಲ್ ಸಂಖ್ಯೆಯೊಂದಿಗೆ ಫೆ. 10ರೊಳಗೆ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು.
ವಿಜೇತರಿಗೆ ಫೆ . 14ರಂದು ಸಂಜೆ 6 ಗಂಟೆಗೆ ಏರ್ಪಡಿಸಿರುವ ದತ್ತಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂಘದ ಕಚೇರಿ ಸಂಪಕಿರ್ಸಬಹುದು ಎಂದು ಶಂಕರ ಹಲಗತ್ತಿ ತಿಳಿಸಿದ್ದಾರೆ.