

ಕಂಪ್ಲಿ; ಸಾಮಾಜಿಕ ಜಾಲತಾಣಗಳ ಮೋಹಕ್ಕೆ ಮಕ್ಕಳು ಬಲಿಯಾಗುತ್ತಿರುವುದು ವಿಷಾದನೀಯ ಎಂದು ಎಮ್ಮಿಗನೂರಿನ ಎಸ್.ಡಬ್ಲ್ಯು.ಎಸ್ ಸಹಿಪ್ರಾ ಶಾಲೆ ಅತಿಥಿ ಶಿಕ್ಷಕ ಎಚ್.ಮಲ್ಲೇಶ್ ಹೇಳಿದರು.
ಇದನ್ನೂ ಓದಿ: ಕೋಡಿಕೊಪ್ಪದ ವೀರಪ್ಪಜ್ಜನವರ ಜೀವನ ದರ್ಶನ ಪ್ರವಚನ ಸಮಾರೋಪ
ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಸೋಮವಾರ ಆಯೋಜಿಸಿದ್ದ 181ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಶರಣರ ವಿಚಾರಧಾರೆಯ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದರು. ಮಕ್ಕಳನ್ನು ಮೊಬೈಲ್ ದಾಸರನ್ನಾಗಿಸದೆ ಪುಸ್ತಕದ ಓದುಗರನನ್ನಾಗಿ ರೂಪಿಸುವ ಅಗತ್ಯಯಿದೆ.
ಅಸ್ಪಶ್ಯತೆ, ಜಾತೀಯತೆ, ಅಜ್ಞಾನ, ಮೂಢನಂಬಿಕೆ, ಬಡತನ, ಭ್ರಷ್ಟಾಚಾರ ಮೊದಲಾದ ಸಾಮಾಜಿಕ ಪಿಡುಗುಗಳನ್ನು ಹಿಮ್ಮೆಟ್ಟಲು ವಚನ ಸಾಹಿತ್ಯದ ಅನುಷ್ಠಾನದ ಅಗತ್ಯಯಿದೆ ಎಂದರು.
ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ ಮಾತನಾಡಿ, ಸಮಯ ವ್ಯರ್ಥ ಮಾಡದೆ ಚಿಂತನಶೀಲರಾಗಬೇಕು. ಪ್ರಾಮಾಣಿಕತೆಯಿಂದ ದುಡಿದು ಗಳಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಿದೆ ಎಂದರು.
ಪಾಠಶಾಲೆ ಸಂಚಾಲಕ ಅರವಿ ಅಮರೇಶಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಲಿಗಾರ ವೆಂಕಟರೆಡ್ಡಿ, ಪ್ರಮುಖರಾದ ಟಿ.ತಿಪ್ಪೇಸ್ವಾಮಿ, ಎಸ್.ರಾಮು, ಬಿ.ಎಂ.ರುದ್ರಯ್ಯ, ಎಸ್.ಡಿ.ಬಸವರಾಜ, ಅಶೋಕ ಕುಕನೂರು, ಎಚ್.ಪಂಪಾಪತಿ, ಎಸ್.ಶಾಮಸುಂದರರಾವ್, ಮಡಿವಾಳ ಹುಲುಗಪ್ಪ, ಎಸ್.ರಾಮಪ್ಪ, ಗೌಳೇರು ಶೇಖರಪ್ಪ, ಹಂಚಿನಾಳ ಪೀರಸಾಬ್, ಅಂಬಿಗರ ಮಂಜುನಾಥ ಇತರರಿದ್ದರು.