

ಸಿಂಧನೂರು: ನೆಮ್ಮದಿ ಹಾಗೂ ಸಂಸ್ಕಾರದ ಬದುಕು ಕಂಡುಕೊಳ್ಳಬೇಕಾದರೆ ವಚನ ಸಾಹಿತ್ಯದ ಮೊರೆ ಹೋಗಬೇಕು ಎಂದು ಅನುಭಾವಿ ರುದ್ರಪ್ಪ ಸೂಳಿಕೆರಿ ಹೇಳಿದರು.
ಕುರುಕುಂದ ಗ್ರಾಮದ ಬಸವಕೇಂದ್ರ ಸಭಾಂಗಣದಲ್ಲಿ ಬಸವಕೇಂದ್ರ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಸಂಸ್ಕಾರದ ಬದುಕಿಗಾಗಿ ವಚನ ಶ್ರವಣ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ವಚನಗಳಲ್ಲಿ ಇರುವ ವಿಷಯಗಳೇ ಜೀವನದ ಮೌಲ್ಯಗಳಾಗಿದ್ದು, ಅವುಗಳನ್ನು ಅರ್ಥೈಸಿಕೊಂಡಲ್ಲಿ ಬದುಕು ಉತ್ತಮಗೊಳ್ಳಲಿದೆ ಎಂದರು.
ಅನುಭಾವಿ ಸಾವಿತ್ರಿ ಬಾದರ್ಲಿ ಮಾತನಾಡಿ, ವಚನ ಸಾಹಿತ್ಯ ಜೀವಂತಿಕೆಯ ಸಾಹಿತ್ಯವಾಗಿದ್ದು, ಸಾರ್ವಕಾಲಿಕವಾಗಿದೆ. ದೈನಂದಿನ ಬದುಕಿಗೆ ಸ್ಫೂರ್ತಿಯಾಗಿದ್ದು, ಮಹಿಳೆಯರಿಗೆ ಶಕ್ತಿ ಕೊಟ್ಟ ಸಾಹಿತ್ಯ ಇದಾಗಿದೆ ಎಂದರು. ಸಾನ್ನಿಧ್ಯವನ್ನು ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ ವಹಿಸಿದ್ದರು. ಬಸವಕೇಂದ್ರ ತಾಲೂಕು ಘಟಕದ ಮಾಜಿ ಅಧ್ಯಕ್ಷ ನಾಗಭೂಷಣ ನವಲಿ, ಶರಣಯ್ಯಸ್ವಾಮಿ ವಚನ ಪ್ರಾರ್ಥಿಸಿದರು. ಮಹಾಂತಮ್ಮ ನಿರೂಪಿಸಿದರು.