ಕನ್ನಡಕ್ಕೆ ವಚನ ಸಾಹಿತ್ಯ ಕೊಡುಗೆ ಅಮೋಘ

mbl 14-2
ಮುದ್ದೇಬಿಹಾಳದಲ್ಲಿ ಶರಣ ಬೆಳಗು ಹುಣ್ಣಿಮೆ ಕಾರ್ಯಕ್ರಮವನ್ನು ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜಿಸಿ ಉದ್ಘಾಟಿಸಲಾಯಿತು. ಬಸವರಾಜ ಹಂಚಲಿ, ಎಸ್.ಎಲ್. ಗುರವ, ಡಾ. ಬೋರಮ್ಮ ರಾಂಪುರ, ಬಸವರಾಜ ನಾಲತವಾಡ ಇತರರಿದ್ದರು.
Published on

ಮುದ್ದೇಬಿಹಾಳ: ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಅಮೋಘ ಕೊಡುಗೆ ಸಲ್ಲಿಸಿದೆ. ವಚನ ಸಾಹಿತ್ಯದಿಂದಾಗಿಯೇ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ವಚನಗಳು ಬದುಕಿಗೆ ಬೆಳಕನ್ನು ನೀಡುತ್ತವೆ. ಸಾತ್ವಿಕ ಗುಣಗಳು ವಚನಗಳ ಅಧ್ಯಯನದಿಂದ ಬರುತ್ತವೆ ಎಂದು ಶಿಕ್ಷಕ, ವಾಗ್ಮಿ ಬಸವರಾಜ ಹಂಚಲಿ ಹೇಳಿದರು.

ಗಣಿತ ಲೋಕ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಲಿಂ. ಬಸವರಾಜ ಮಲಕಪ್ಪ ಸುಂಠಾಣ, ಲಿಂ. ಸಿದ್ದಲಿಂಗಪ್ಪ ಗವಣ್ಣವರ ಕುರಿತ ದತ್ತಿ, ಶರಣ ಬೆಳಗು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.

ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ ಮಾತನಾಡಿ, ಲಿಂಗದ ಮಹತ್ವ, ಸದಾಚಾರ, ಶಿವಾಚಾರ, ಲಿಂಗಾಚಾರಗಳ ಅರಿವನ್ನು ಶಿವನಾಗಮಯ್ಯರ ವಚನಗಳು ಮೂಡಿಸುತ್ತವೆ ಎಂದರು.

ಮಹಾದೇವಿ ನಾಲತವಾಡ, ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ಎಸ್. ಗವಣ್ಣವರ್, ಡಾ.ಗೀತಾ ಪಾಟೀಲ, ಡಾ. ಬೋರಮ್ಮ ಪೊಲೀಸ್‌ಪಾಟೀಲ ಮಾತನಾಡಿದರು. ಹಂಚಲಿ, ನಾಲತವಾಡ, ನಿವೃತ್ತ ದೈಹಿಕ ಶಿಕ್ಷಕ ಎಸ್.ಎಲ್. ಗುರವ ಅವರನ್ನು ಸನ್ಮಾನಿಸಲಾಯಿತು.

ಬಸವರಾಜ ಗುರವ, ಲಕ್ಕಪ್ಪ ಗುರವ, ಚಂದ್ರಶೇಖರ ಇಟಗಿ, ಬಸವರಾಜ ಕೋರಿ, ಸಂಗಣ್ಣ ಕಟ್ಟಿ, ಬಾಪುಗೌಡ ಪಾಟೀಲ, ಎಸ್.ಆರ್. ಗೌಡರ, ಎಸ್.ಎಸ್. ಹುನಗುಂದ, ಸರೋಜಿನಿ ದೇವೂರ, ಗುರುದೇವಿ ಇಟಗಿ, ಲಲಿತಾ ಕಟಗೇರಿ, ನೀಲಮ್ಮ ನಾವದಗಿ, ದ್ರಾಕ್ಷಾಯಣಿ ಮೋಟಗಿ, ಶೈಲಾ ರಾಂಪುರ, ಶಿಕ್ಷಕರು, ವಿದ್ಯಾರ್ಥಿಗಳು, ಮನೆಯಲ್ಲಿ ಮಹಾಮನೆ ಬಳಗ, ಶರಣ ಸಾಹಿತ್ಯ ಪರಿಷತ್ ಬಳಗದವರು ಇದ್ದರು. ಸಂಗಮೇಶ ಶಿವಣಗಿ, ಲಕ್ಷ್ಮೀ ಇಲಕಲ್ ಪ್ರಾರ್ಥಿಸಿದರು. ಎಸ್.ಎಲ್. ಗುರವ ಬಸವ ಭಾವಪೂಜೆ ನಡೆಸಿಕೊಟ್ಟರು. ಸಿ.ಜಿ.ನಾಗರಾಳ ಸ್ವಾಗತಿಸಿದರು. ಸರೋಜಾ ಕೋರಿ ನಿರೂಪಿಸಿದರು. ಚೈತನ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net