ವಚನ ದರ್ಶನ ಆಧ್ಯಾತ್ಮಕ ಪ್ರವಚನ ಇಂದಿನಿಂದ

Vachana Darshana Theological Discourse From today
ಬಸವನಬಾಗೇವಾಡಿಯ ಸಿಬಿಎಸ್‌ಇ ಶಾಲಾ ಆವರಣದ ನಂದೀಶ್ವರ ರಂಗಮಂದಿರದಲ್ಲಿ ಒಂದು ತಿಂಗಳ ಕಾಲ ಜರುಗಲಿರುವ ವಚನದರ್ಶನ ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮದ ಸಿದ್ಧತೆಯನ್ನು ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ಎಂ.ಜಿ. ಆದಿಗೊಂಡ ಹಾಗೂ ಪಿಕಾರ್ಡ್ ಬ್ಯಾಂಕ್‌ನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಇತರರು ವೀಕ್ಷಿಸಿದರು.
Published on

ಬಸವನಬಾಗೇವಾಡಿ : ಶ್ರಾವಣ ಮಾಸದ ಪ್ರಯುಕ್ತ ಪಟ್ಟಣದ ಸಿಬಿಎಸ್‌ಇ ಶಾಲಾ ಆವರಣದ ನಂದೀಶ್ವರ ರಂಗಮಂದಿರದಲ್ಲಿ ಆ. 17ರಿಂದ ಒಂದು ತಿಂಗಳಕಾಲ ಪ್ರತಿದಿನ ಸಂಜೆ 6ಕ್ಕೆ ವಚನ ದರ್ಶನ ಆಧ್ಯಾತ್ಮಕ ಪ್ರವಚನ ಜರುಗಲಿದೆ.

ಮಂಗಳವಾರ ಬಸವೇಶ್ವರ ಸೇವಾ ಸಮಿತಿ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಬಸವಸೈನ್ಯ ಹಾಗೂ ಬಸವೇಶ್ವರ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಸಿಬಿಎಸ್‌ಇ ಶಾಲಾ ಆವರಣದ ನಂದೀಶ್ವರ ರಂಗಮಂದಿರದಲ್ಲಿ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6ಕ್ಕೆ ವಚನದರ್ಶನ ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮದ ಸಿದ್ಧತೆಯನ್ನು ಮೂಲನಂದಿಶ್ವರ ಬಸವೇಶ್ವರ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ಎಂ.ಜಿ. ಆದಿಗೊಂಡ ಹಾಗೂ ಪಿಕಾರ್ಡ್ ಬ್ಯಾಂಕ್‌ನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ವೀಕ್ಷಿಸಿ ಮಾತನಾಡಿ, ಲಿಂಗಸೂರ ತಾಲೂಕಿನ ಕಲ್ಯಾಣ ಆಶ್ರಮದ ಮಹಾಂತೇಶ್ವರಮಠ ತಿಮ್ಮಾಪುರದ ಮಹಾಂತ ಸ್ವಾಮೀಜಿ ಅವರಿಂದ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಪ್ರತಿದಿನ ಬಸವಣ್ಣನವರು ಹಾಗೂ ಅವರ ಸಮಕಾಲಿನ ಬಸವಾದಿ ಶರಣರ ವಚನ ದರ್ಶನ ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದರು.

ಮಳೆ ಬಂದರು ಪ್ರವಚನಕ್ಕೆ ಯಾವುದೇ ಅಡೆತಡೆ ಆಗಬಾರದು ಎಂಬ ಉದ್ದೇಶದಿಂದ ನಂದೀಶ್ವರ ರಂಗಮಂದಿರದ ಮುಂದೆ ಸುಮಾರು 100 + 250 ಅಳತೆಯ ಬೃಹತ್ ಪತ್ರಾಸಿನ ವೇದಿಕೆ ಹಾಕಲಾಗಿದೆ.

ಈ ವಚನದರ್ಶನ ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸುವ ಪರಸ್ಥಳದ ಭಕ್ತರಿಗೆ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.

ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಿವಾನಂದ ಈರಕಾರ ಮುತ್ಯಾ ನೇತೃತ್ವ ವಹಿಸುವರು.

ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಸವರಾಜ ಪೂಜಾರಿ, ಹಿರಿಯ ಸಾಹಿತಿ ಲ.ರು. ಗೊಳಸಂಗಿ, ಸಂಗಪ್ಪ ಅಡಗಿಮನಿ, ಶಿವನಗೌಡ ಬಿರಾದಾರ, ಬಿ.ಕೆ. ಕಲ್ಲೂರ ಇತರರು ಪಾಲ್ಗೊಳ್ಳುವರು ಎಂದರು.

ಸಂಗಣ್ಣ ಕಲ್ಲೂರ, ಸುಭಾಸ ಚಿಕ್ಕೊಂಡ, ಉಮೇಶ ಹಾರಿವಾಳ, ಶೇಖರಗೌಡ ಪಾಟೀಲ, ಜಿ.ಎಸ್. ಚಿನವಾಲ, ಶಂಕರಗೌಡ ಬಿರಾದಾರ, ರವಿ ರಾಠೋಡ, ಶೇಖರ ಗೊಳಸಂಗಿ, ಸುರೇಸಗೌಡ ಪಾಟೀಲ, ಕಾಶಿನಾಥ ರಾಠೋಡ, ಶ್ರೀಧರ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net