ವಚನ ಸಂಸ್ಕೃತಿ ಮಕ್ಕಳ ಬೆಳವಣಿಗೆಗೆ ಪೂರಕ

TKE 2 (1)
Published on

ತರೀಕೆರೆ: ಶರಣರ ಹಾದಿಯಲ್ಲಿ ಸಾಗಿದರೆ ಜೀವನ ಉತ್ತಮಗೊಳ್ಳಲಿದೆ ಎಂದು ಸಾಣೇಹಳ್ಳಿ ಡಾ. ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.

ಪಟ್ಟಣದ ಅಕ್ಕನಾಗಲಾಂಬಿಕೆ ಗದ್ದುಗೆ ಆವರಣದಲ್ಲಿ ನಿರ್ಮಿಸಿರುವ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶಿವ ಶರಣೆ ಅಕ್ಕನಾಗಲಾಂಬಿಕೆಯವರ ವಚನ ಲಕಗಳ ಅನಾವರಣ ಮತ್ತು ಬಸವ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿ, ವಚನ ಸಂಸ್ಕೃತಿ ಮಕ್ಕಳ ಬೆಳವಣಿಗೆಗೆ ಪೂರಕ. ವಚನಗಳು ಜೀವನವನ್ನು ಸನ್ಮಾರ್ಗದತ್ತ ಕೊಂಡೊಯ್ಯಲಿದೆ. ಎಲ್ಲದಕ್ಕೂ ಸರ್ಕಾರವನ್ನು ಅವಲಂಬಿಸಿದರೆ ಸಾಲದು. ಆರ್ಥಿಕವಾಗಿ ಸದೃಢರಾಗಿರುವವರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಅಕ್ಕನಾಗಲಾಂಬಿಕೆ ಗದ್ದುಗೆ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದರು.

ಸಾಣೇಹಳ್ಳಿಯಲ್ಲಿ ಇದೇ ತಿಂಗಳ 15ರಂದು ವಚನ ಸ್ಪರ್ಧೆ ಏರ್ಪಡಿಸಲಾಗಿದೆ. 500ವಚನ ಪಠಿಸಿದವರಿಗೆ ಆಕರ್ಷಕ ನಗದು ಬಹುಮಾನ ನೀಡುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಮಠದ ಸ್ವಾಮೀಜಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ 500 ವಚನ ವಾಚಿಸಿದರೆ ಅವರಿಗೆ 40 ಸಾವಿರ ರೂ.ವಿಶೇಷ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಡಾ.ಜಿ.ವಿ.ಮಂಜುನಾಥ್ ಹಾಗೂ ರಾಷ್ಟ್ರೀಯ ಬಸವ ದಳದ ಸುಮಾ ಹಾಗೂ ಚೇತನ್‌ಗೌಡ ಶಿವ ಶರಣೆ ಅಕ್ಕನಾಗಲಾಂಬಿಕೆ ಜೀವನ ಕುರಿತು ಪ್ರಧಾನ ಉಪನ್ಯಾಸ ನೀಡಿದರು. ಜಿಪಂ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ, ಜೆಎಲ್‌ಎಂ ಅಧ್ಯಕ್ಷ ಚಂದ್ರಶೇಖರ್, ಪ್ರಮುಖ ಎಸ್.ಧರಣೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net